ಇನ್ನೇನು ಇಂದಿನಿಂದ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದ್ದು. ಫ್ರಾನ್ಸ್ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಇದು ಮೂರನೇ ಬಾರಿ. ಹೀಗಾಗಿ ಈ ಕ್ರೀಡಾಕೂಟವನ್ನು ಇನ್ನಷ್ಟು ವಿಶೇಷಗೊಳಿಸುವ ಸಲುವಾಗಿ ಆಯೋಜಕರು ಹೊಸ ಪ್ರಯೋಗಕ್ಕೆ ಕೈಹಾಕಿದ್ದಾರೆ ಅದರಂತೆ ಫುಟ್ಬಾಲ್ ಪಂದ್ಯದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ಗೆ ಚಾಲನೆ ದೊರೆಯಲಿದ್ದು, ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಮೊರಾಕ್ಕೊ ತಂಡಗಳು ಮುಖಾಮುಖಿಯಾಗಲಿದೆ.
ಉದ್ಘಾಟನೆಗೂ ಮುನ್ನ ಪಂದ್ಯಗಳ ಆರಂಭವೇಕೆ?
ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಪಂದ್ಯಾವಳಿ ಆರಂಭಿಸುವ ಸಂಪ್ರದಾಯ ಶುರುವಾಗಿದ್ದು, 1992 ರಲ್ಲಿ. ಬಾರ್ಸಿಲೋನಾ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿಗೆ ಉದ್ಘಾಟನೆಗೂ ಮುನ್ನ ಕೆಲ ಪಂದ್ಯಗಳನ್ನು ನಡೆಸಲಾಗಿತ್ತು. ಇದಾದ ಬಳಿಕ ಪ್ರತಿ ಒಲಿಂಪಿಕ್ಸ್ನಲ್ಲೂ ಈ ಸಾಂಪ್ರದಾಯ ಮುಂದುವರೆಸಲಾಗಿದೆ.
ಮತ್ತೊಂದು ಕಾರಣವೆಂದರೆ ಮೈದಾನದ ಬಳಕೆ. ಫುಟ್ಬಾಲ್, ರಗ್ಬಿ ಸೇರಿದಂತೆ ಕೆಲ ಪಂದ್ಯಗಳು ದೀರ್ಘಾವಧಿಯಲ್ಲಿ ನಡೆಯುತ್ತವೆ. ಅಂದರೆ ಮೊದಲ ಸುತ್ತು, ದ್ವಿತೀಯ ಸುತ್ತು, ಸೆಮಿಫೈನಲ್, ಫೈನಲ್…ಹೀಗೆ ಸಾಗುತ್ತದೆ. ಇಲ್ಲಿ ಪುರುಷ ಮತ್ತು ಮಹಿಳಾ ತಂಡಗಳ ಪಂದ್ಯಗಳನ್ನೂ ಸಹ ಆಯೋಜಿಸಬೇಕಾಗುತ್ತದೆ. ಹೀಗಾಗಿ ಸತತ ಪಂದ್ಯಗಳನ್ನು ಆಯೋಜಿಸಲು ಮೈದಾನದ ಅಗತ್ಯತೆಯಿರುತ್ತದೆ.
ಪ್ಯಾರಿಸ್ ಒಲಿಂಪಿಕ್ಸ್ ಜುಲೈ 24ರ ವೇಳಾಪಟ್ಟಿ:
- 6:30 PM- ಫುಟ್ಬಾಲ್ – ಅರ್ಜೆಂಟೀನಾ vs ಮೊರಾಕೊ
- 6:30 PM – ಫುಟ್ಬಾಲ್ – ಉಜ್ಬೇಕಿಸ್ತಾನ್ vs ಸ್ಪೇನ್
- 7:00 PM – ರಗ್ಬಿ ಸೆವೆನ್ಸ್ – ಆಸ್ಟ್ರೇಲಿಯಾ ವಿರುದ್ಧ ಸಮೋವಾ
- 7:30 PM- ರಗ್ಬಿ ಸೆವೆನ್ಸ್ – ಅರ್ಜೆಂಟೀನಾ vs ಕೀನ್ಯಾ
- 8:00 PM – ರಗ್ಬಿ ಸೆವೆನ್ಸ್ – ಫ್ರಾನ್ಸ್ vs ಯುನೈಟೆಡ್ ಸ್ಟೇಟ್ಸ್
- 8:30 PM – ಫುಟ್ಬಾಲ್ – ಗಿನಿ ವಿರುದ್ಧ ನ್ಯೂಝಿಲೆಂಡ್
- 8:30 PM – ಫುಟ್ಬಾಲ್ – ಈಜಿಪ್ಟ್ vs ಡೊಮಿನಿಕನ್ ರಿಪಬ್ಲಿಕ್
- 8:30 PM – ರಗ್ಬಿ ಸೆವೆನ್ಸ್ – ಫಿಜಿ vs ಉರುಗ್ವೆ
- 9:00 PM – ರಗ್ಬಿ ಸೆವೆನ್ಸ್ – ಐರ್ಲೆಂಡ್ vs ಸೌತ್ ಆಫ್ರಿಕಾ
- 9:30 PM – ರಗ್ಬಿ ಸೆವೆನ್ಸ್ – ನ್ಯೂಝಿಲೆಂಡ್ vs ಜಪಾನ್
- 10:30 PM – ಫುಟ್ಬಾಲ್ – ಇರಾಕ್ vs ಉಕ್ರೇನ್
- 10:30 PM – ಫುಟ್ಬಾಲ್ – ಜಪಾನ್ vs ಪರಾಗ್ವೆ
- 10:30 PM – ರಗ್ಬಿ ಸೆವೆನ್ಸ್ – ಆಸ್ಟ್ರೇಲಿಯಾ vs ಕೀನ್ಯಾ
- 11:00 PM – ರಗ್ಬಿ ಸೆವೆನ್ಸ್ – ಅರ್ಜೆಂಟೀನಾ vs ಸಮೋವಾ
- 11:30 PM – ರಗ್ಬಿ ಸೆವೆನ್ಸ್ – ಫ್ರಾನ್ಸ್ vs ಉರುಗ್ವೆ
- 12:00 AM – ರಗ್ಬಿ ಸೆವೆನ್ಸ್ – ಫಿಜಿ vs ಯುನೈಟೆಡ್ ಸ್ಟೇಟ್ಸ್
- 12:30 AM – ಫುಟ್ಬಾಲ್ – ಫ್ರಾನ್ಸ್ vs ಯುನೈಟೆಡ್ ಸ್ಟೇಟ್ಸ್
- 12:30 AM – ಫುಟ್ಬಾಲ್ – ಮಾಲಿ vs ಇಸ್ರೇಲ್
- 12:30 AM – ರಗ್ಬಿ ಸೆವೆನ್ಸ್ – ಐರ್ಲೆಂಡ್ vs ಜಪಾನ್
- 01:00 AM – ರಗ್ಬಿ ಸೆವೆನ್ಸ್ – ನ್ಯೂಝಿಲೆಂಡ್ vs ಸೌತ್ ಆಫ್ರಿಕಾ