ಮುಂದಿನ ವರ್ಷವೂ ಧೋನಿ ಐಪಿಎಲ್ ಆಡ್ತಾರೆ ಎಂದು ಸಿಎಸ್ಕೆ ಸಿಇಒ ಸ್ಪಷ್ಟನೆ ನೀಡಿದ್ದಾರೆ.
Siddaramaiah: ಪ್ರಜ್ವಲ್ ಬಗ್ಗೆ ಪ್ರಧಾನಿಗೆ ಪತ್ರ ಬರೆದು ಸಾಕಾಗಿದೆ, ಉತ್ತರ ಇಲ್ಲ – ಸಿದ್ದರಾಮಯ್ಯ
2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಧೋನಿ ಐಪಿಎಲ್ನಲ್ಲಿ ಸಿಎಸ್ಕೆ ಪರ ಆಡುವುದನ್ನು ಮುಂದುವರಿಸಿದ್ದಾರೆ. 2024ರ ಐಪಿಎಲ್ನಲ್ಲಿಯೂ ಅವರು ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ ಗಳಿಸಿದ್ದಾರೆ.
ತಂಡವು 2023ರಲ್ಲಿ ಐಪಿಎಲ್ ಗೆದ್ದ ನಂತರ, ಎಂಎಸ್ ಧೋನಿ ಆ ಋತುವಿನಲ್ಲಿ ಅಭಿಮಾನಿಗಳು ತೋರಿದ ಪ್ರೀತಿಗೆ ಪ್ರತಿಯಾಗಿ ಮತ್ತೊಂದು ಋತುವಿನಲ್ಲಿ ಆಡುವ ಭರವಸೆ ನೀಡಿದ್ದರು. ಹೀಗಾಗಿ ಐಪಿಎಲ್ 2024 ರ ಆವೃತ್ತಿಯಲ್ಲಿ ಆಡಿದ್ದರು. ಆದಾಗ್ಯೂ ಧೋನಿಯ ಕ್ರಿಕೆಟ್ ಅಧ್ಯಾಯದ ಕೊನೆ ಎಲ್ಲಿ ಎಂದು ಯಾರಿಗೂ ಗೊತ್ತಿಲ್ಲ. ಈ ಬಾರಿಯೂ ಅವರು ವಿದಾಯ ಘೋಷಿಸಿಲ್ಲ
ಐದು ಬಾರಿಯ ಚಾಂಪಿಯನ್ ತಂಡ 2024ರ ಆವೃತ್ತಿಯ ಗುಂಪು ಹಂತದಿಂದ ಹೊರಕ್ಕೆ ಹೋಗಿತ್ತು. ಹೀಗಾಗಿ ಧೋನಿ ಮುಂದಿನ ಋತುವಿಗೆ ಮರಳುತ್ತಾರೆಯೇ ಎಂಬುದರ ಕುರಿತು ಯಾವುದೇ ಸ್ಪಷ್ಟನೆ ಇಲ್ಲ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಅವರು ಮುಂದೆ ಬಂದು ಧೋನಿ ಮರಳುವ ಭರವಸೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಧೋನಿಯ ಬಗ್ಗೆ ನನಗೆ ಗೊತ್ತಿಲ್ಲ. ಇದು ಅವರು ಮಾತ್ರ ಉತ್ತರಿಸಬಹುದಾದ ಪ್ರಶ್ನೆ, ನಮ್ಮ ಬದ್ಧತೆ ಏನೆಂದರೆ ಅವರು ತೆಗೆದುಕೊಂಡ ನಿರ್ಧಾರಗಳನ್ನು ನಾವು ಯಾವಾಗಲೂ ಗೌರವಿಸುವುದು. ಅದನ್ನು ನಾವು ಅವರಿಗೆ ಬಿಟ್ಟಿದ್ದೇವೆ. ನಿಮಗೆಲ್ಲ ತಿಳಿದಿರುವಂತೆ, ಅವರು ಯಾವಾಗಲೂ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ನಿರ್ಧರಿಸಿದಂತೆ ನಾವು ನಮ್ಮ ಕೆಲಸ ಮಾಡುತ್ತೇವೆ. ಆದಾಗ್ಯೂ ಮುಂದಿನ ವರ್ಷ ಅವರು ಸಿಎಸ್ಕೆಗೆ ಲಭ್ಯವಾಗುತ್ತಾರೆ ಎಂದೇ ನಾವು ಭಾವಿಸುತ್ತೇವೆ ” ಎಂದು ಕಾಶಿ ವಿಶ್ವನಾಥನ್ ಸಿಎಸ್ಕೆ ಯ ಯೂಟ್ಯೂಬ್ ಚಾನೆಲ್ ಮೂಲಕ ಹೇಳಿದ್ದಾರೆ
![](https://ainlivenews.com/wp-content/uploads/2024/01/Ad-Banner-copy-scaled.jpg)