ರಾಯಚೂರು: ಸ್ವಾಮೀಜಿ ಕುಂಭಮೇಳಕ್ಕೆ ಹೋಗಿದ್ದ ವೇಳೆ ಮಠ ಮತ್ತು ಗೋಶಾಲೆಯನ್ನು ತೆರವುಗೊಳಿಸಿರುವ ಘಟನೆ ರಾಯಚೂರು ತಾ. ಯಗನೂರು ಗ್ರಾಮದ ಬಳಿ ನಡೆದಿದೆ. ರಾಯಚೂರು ಜಿಲ್ಲಾಧಿಕಾರಿ ನಿತೀಶ್. ಕೆ. ಆದೇಶ ಮೇರೆಗೆ ಎಸಿ ಗಜನನ ಬಾಳೆ ನೇತೃತ್ವದಲ್ಲಿ ಮಠ ತೆರವುಗೊಳಿಸಲಾಗಿದೆ.
ಹೆಗಲ ಮೇಲೆ ಕೇಸರಿ,ಬಿಳಿ, ಹಸಿರಿನ ಶಾಲು, ಎದೆಯೊಳಗೆ ಸಂವಿಧಾನ ; ಗಾಂಧಿ ಭಾರತದ ಆತ್ಮವೆಂದ ಡಿಕೆಶಿ
ಯಗನೂರು ಗ್ರಾಮದ ಹೊರವಲಯದಲ್ಲಿನ ಮೃತ್ಯುಂಜಯ ಮಠವನ್ನು ತೆರವುಗೊಳಿಸಲಾಗಿದೆ. ಮಠದ ಸ್ವಾಮೀಜಿ ಜ್ಞಾನಾಂದಸ್ವಾಮಿ ಕುಂಭಮೇಳಕ್ಕೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಕಳೆದ 8-10 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಮೃತ್ಯುಂಜಯ ಮಠ ನಿರ್ಮಿಸಿದ ಜ್ಞಾನಾನಂದಸ್ವಾಮಿ, ಸುಮಾರು 4 ಎಕರೆ ಪ್ರದೇಶದಲ್ಲಿ ಮಠ, ಗೋಶಾಲೆ ನಡೆಸುತ್ತಿದ್ದರು. ಇದೀಗ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಿದ್ದು, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.