ಕೋಲಾರ: ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು 53 ಲಕ್ಷ 11 ಸಾವಿರ ಕೋಟಿ ಈ ದೇಶದ ಮೇಲೆ ಸಾಲ ಇತ್ತು. ಈಗ 125 ಲಕ್ಷ ಕೋಟಿ ಈ ದೇಶದ ಮೇಲೆ ಸಾಲ ಇದೆ ಎಂದು ಕೋಲಾರದಲ್ಲಿ ಮೋದಿ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
Video Player
00:00
00:00
ಕರ್ನಾಟವನ್ನ ದಿವಾಳಿ ಮಾಡಿದ್ದಾರೆ ಎನ್ನುವ ಮೋದಿ ಅವರು, ಇದೀಗ ಯಾರೂ ದಿವಾಳಿ ಮಾಡಿದ್ದಾರೆ. ಮಿಸ್ಟರ್ ನರೇಂದ್ರ ಮೋದಿ ದೇಶವನ್ನ ದಿವಾಳಿ ಮಾಡಿದ್ದಾರೆ. ಬೇಕಾದರೆ ಕರಿರಿ ನರೇಂದ್ರ ಮೋದಿ ಅವರನ್ನ ಹೇಳುತ್ತೇನೆ. ಕಾಂಗ್ರೇಸ್ ಪಕ್ಷ ಹೆಚ್ಚು ದಿನ ಇರುವುದಿಲ್ಲ ಎನ್ನುವುದು ಮೋದಿ ಅವರ ಹಗಲುಗನಸು ಎಂದು ಮೋದಿ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು.