ಉತ್ತರ ಕನ್ನಡ: ಟಿಕೆಟ್ ಸಿಗದ ಹಿನ್ನೆಲೆ ಮುನಿಸಿಕೊಂಡಿರುವ ಅನಂತ್ ಕುಮಾರ್, ಇದುವರೆಗೂ ಬಹಿರಂಗವಾಗಿ ಕಾಣಿಸಿಕೊಳ್ಳದೆ, ಒಂದೇ ಒಂದು ಹೇಳಿಕೆಯನ್ನ ಕೊಡದೆ ಫುಲ್ ಸೈಲೆಂಟ್ ಆಗಿದ್ದಾರೆ.
ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅನಂತ್ ಕುಮಾರ್ ಸೈಲೆಂಟ್ ಆಗಿದ್ದುಕೊಂಡು ಪರೋಕ್ಷವಾಗಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ್ದರೂ ಎಂಬ ಮಾತಿದೆ. ಈಗ ಮತ್ತೆ ಅವರು ಸೈಲೆಂಟ್ಗೆ ಸರಿದಿದ್ದು, ಕಮಲ ಅಭ್ಯರ್ಥಿ ಕಾಗೇರಿ ಸೇರಿದಂತೆ ಇನ್ನೂಳಿದ ನಾಯಕರಿಗೂ ಟೆನ್ಷನ್ ತಂದಿಟ್ಟಿದೆ. ಅವರ ಭೇಟಿಗೆ ಅವಕಾಶ ಕೊಡಿ ಎಂದು ಕಾಗೇರಿ ಕರೆ ಮಾಡಿ ಕೇಳಿದರೂ ಸರಿಯಾಗಿ ಪ್ರತಿಕ್ರಿಯಿಸದೆ ಇದುವರೆಗೂ ಭೇಟಿಗೂ ಅವಕಾಶ ಕೊಟ್ಟಿಲ್ಲ. ಹೇಗಾದರೂ ಮಾಡಿ ಅನಂತ್ ಕುಮಾರ್ ಮುನಿಸು ತಣ್ಣಗಾಗಿಸಲು ಉತ್ತರ ಕನ್ನಡ ಲೋಕಸಭಾ ಉಸ್ತುವಾರಿ ಹರತಾಳು ಹಾಲಪ್ಪ, ಅವರ ಮನೆಗೆ ಭೇಟಿ ನೀಡಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.
ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ , ಆರ್ ಎಸ್ ಎಸ್ ಮುಖ್ಯಸ್ತರು ಸೇರಿದಂತೆ ಕೆಲವರು ಕರೆ ಮಾಡಿ ಮಾತನಾಡಲು ಪ್ರಯತ್ನಿಸಿದ್ದಾರೆ. ಆದ್ರೆ, ಅನಂತ್ ಕುಮಾರ್ ಇವರ ಯಾರ ಕರೆಯನ್ನ ಸ್ವಿಕರಿಸದೆ ಸೈಲೆಂಟ್ ಆಗಿದ್ದಾರೆ ಎಂದು ಬಿಜೆಪಿ ಶಾಸಕ ಬನಸಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರ ಕರೆಯನ್ನೆ ಸ್ವಿಕರಿಸದೆ ಮೊಂಡುತನ ತೋರಿದ ಅನಂತ್ ಕುಮಾರ್, ಲೋಕಸಭಾ ಚುನಾವಣೆಯ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ
ಈಗ ಸದ್ಯ ತಾಯ್ನೆಲದ ಸೇವೆಯಲ್ಲಿ ಶಿರ್ಷಿಕೆ ಅಡಿ ಕದಂಬ ಪುಸ್ತಕ ಬರೆಯುತ್ತಿರುವ ಅನಂತ್ ಕುಮಾರ್ ಹೆಗಡೆ, ತಮ್ಮ ಜೀವನದಲ್ಲಿ ಅನುಭವಿಸಿದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವಿಚಾರಗಳ ಕುರಿತಾದ ವಿಷಯಗಳನ್ನ ಈ ಪುಸ್ತಕದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ನಿತ್ಯ ತಾನು ಬರೆಯುತ್ತಿರುವ ಪುಸ್ತಕದ ಒಂದೊಂದು ಪುಟವನ್ನ ತನ್ನ ಫೆಸ್ ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದಕ್ಕೆ ಕೈ ನಾಯಕ ಬಿಕೆ ಹರಿಪ್ರಸಾದ್ ವ್ಯಂಗ್ಯ ಮಾಡಿದ್ದಾರೆ. ಒಟ್ಟಾರೆಯಾಗಿ ರಾಜಕೀಯದಿಂದ ದೂರ ಉಳಿದಿರುವ ಸಂಸದ ಅನಂತ್ ಕುಮಾರ್ ಹೆಗಡೆ. ಪುಸ್ತಕ ಬರೆಯುವುದರ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ