ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರಿಗೆ ಯಾವಾಗ ಮದುವೆ ಅನ್ನೋ ಪ್ರಶ್ನೆ ಕಾಡುತ್ತಿತ್ತು. ಇದೀಗ ಉತ್ತರ ಸಿಕ್ಕಿದೆ ನೋಡಿ.. ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಸಂಸದ ಎಂದೇ ಕರೆಯಿಸಿಕೊಂಡಿರುವ ತೇಜಸ್ವಿ ಸೂರ್ಯ ಈಗ ಹಸಮಣೆ ಏರಲು ರೆಡಿಯಾಗಿದ್ದಾರೆ. ಹೌದು ಚೆನ್ನೈ ಮೂಲದ ಸಿವಶ್ರೀ ಸ್ಕಂದ ಪ್ರಸಾದ್ ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಶಿವಶ್ರೀ ಸ್ಕಂದ ಪ್ರಸಾದ್ ಅವರು ಗಾಯಕಿ ಆಗಿದ್ದು ಉತ್ತಮವಾಗಿ ಹಾಡುಗಳನ್ನು ಹಾಡುತ್ತಾರೆ. ಇದರ ಜೊತೆಗೆ ಹರಿಕಥೆ, ಭಜನೆ, ಸೈಕ್ಲಿಂಗ್, ವಾಕ್ಥಾನ್ ಮೂಲಕ ಗಮನ ಸೆಳೆಯುತ್ತಾರೆ. ಶಿವಶ್ರೀ ಸ್ಕಂದ ಪ್ರಸಾದ್ ಅವರು ಕರ್ನಾಟಕ ಸಂಗೀತ ಗಾಯಕಿ ಮತ್ತು ಭರತನಾಟ್ಯ ಕಲಾವಿದರು. ಅವರು ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಯೋ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದಿದ್ದಾರೆ.
ಬೆಳ್ಳಂ ಬೆಳಗ್ಗೆ ಟೀ ಜೊತೆಗೆ ಬಿಸ್ಕತ್ ತಿಂತೀರಾ..? ಹಾಗಾದ್ರೆ ಈ ಅಭ್ಯಾಸ ಈಗ್ಲೇ ಬಿಟ್ಟು ಬಿಡಿ!
ಇದರೊಂದಿಗೆ ಅವರು ಚೆನ್ನೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಎಂಎ ಮತ್ತು ಚೆನ್ನೈ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ಪದವಿ ಪಡೆದಿದ್ದಾರೆ. ಸೈಕ್ಲಿಂಗ್, ಟ್ರೆಕ್ಕಿಂಗ್ ಮತ್ತು ವಾಕಿಂಗ್ನ್ನು ಸಹ ಅವರು ಇಷ್ಟಪಡುತ್ತಾರೆ. ಪೊನ್ನಿಸ್ ಸೆಲ್ವನ್ – ಭಾಗ 2 ರ ಕನ್ನಡ ಆವೃತ್ತಿಯಲ್ಲಿ ಹಾಡನ್ನೂ ಇವರು ಹಾಡಿದ್ದಾರೆ. ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದಪ್ರಸಾದ್ ಅವರ ಎರಡೂ ಕುಟುಂಬಗಳು ಈಗಾಗಲೇ ಮಾತುಕತೆ ನಡೆಸಿ ಮದುವೆಗೆ ಒಪ್ಪಿಗೆ ನೀಡಿವೆ. 2025ರ ಮಾರ್ಚ್ 4 ರಂದು ಮದುವೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ..