ಬೆಂಗಳೂರು:- ಕೋಟ್ಯಂತರ ರೂ. ಮೌಲ್ಯದ ಮರ ಕಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಹೋದರ ವಿಕ್ರಮ್ ಸಿಂಹನನ್ನು ವಶಕ್ಕೆ ಪಡೆಯಲಾಗಿದೆ.
ಹಾಸನ ಜಿಲ್ಲೆಯಲ್ಲಿ ಕೋಟ್ಯಂತರ ರೂ. ಮೌಲ್ಯದ 126 ಮರ ಕಡಿದು ಸಾಗಿಸಿದ ಆರೋಪದಡಿ ವಿಕ್ರಮ್ ಸಿಂಹ ವಿರುದ್ಧ ಕೇಸ್ ದಾಖಲಾಗಿತ್ತು. ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ವಿಕ್ರಮ್ ವಿಚಾರಣೆ ಮಾಡಲಾಗುತ್ತಿದೆ.
ಹಾಸನ ಜಿಲ್ಲೆ ಬೇಲೂರು ತಾಲೂಕಿನ ನಂದಗೊಂಡನಹಳ್ಳಿಯಲ್ಲಿ ಜಯಮ್ಮರಿಗೆ ಸೇರಿದ ಸರ್ವೆ ನಂಬರ್ 16/P2ರಲ್ಲಿರುವ 3.10 ಎಕರೆ ಜಮೀನು ಪಡೆದಿದ್ದ ವಿಕ್ರಮ್ ಸಿಂಹ, ಶುಂಠಿ ಬೆಳೆಯಲು ಜಮೀನು ಪಡೆದು ಅಗ್ರಿಮೆಂಟ್ ಮಾಡಿಕೊಂಡಿದ್ದರು.
ಬೇಲೂರು ತಹಶೀಲ್ದಾರ್ ಮಮತಾ ಸಮಯಪ್ರಜ್ಞೆಯಿಂದ ಡಿ.16ರಂದು 216 ಮರಗಳ ಮಾರಹೋಮ ಪ್ರಕರಣ ಬೆಳಕಿಗೆ ಬಂದಿತ್ತು. ಒಪ್ಪಂದ ಮಾಡಿಕೊಂಡಿದ್ದ ಸರ್ಕಾರಿ ಗೋಮಾಳ ಸೇರಿದಂತೆ ಸೇರಿ 12 ಎಕರೆಯಲ್ಲಿ ಬೆಳೆದಿದ್ದ ಹೊನ್ನೆ, ನಂದಿ, ಗರಿಹೆಬ್ಬೇವು, ಹೆಬ್ಬಲಸು, ಮಾವು, ಹಲಸು ಮರಗಳ ಹನನ ಮಾಡಲಾಗಿದೆ.
25-30 ಲೋಡ್ ಮರ ಕಡಿಯಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಹಶೀಲ್ದಾರ್ ಮಮತಾ ಮಾಹಿತಿ ನೀಡಿದ್ದಾರೆ.