ಹಾಸನ : ಸಂಸದ ಪ್ರಜ್ವಲ್ ರೇವಣ್ಣ ಹಾಗು ಭವಾನಿ ರೇವಣ್ಣ ವಿರುದ್ದ ಕಿರುಕುಳ ಆರೋಪ ಪ್ರಕರಣದ ಭಾಗವಾಗಿ ಮಂಗಳವಾರದಂದು ಪ್ರಜ್ವಲ್ ರೇವಣ್ಣ ನವರ ಮಾಜಿ ಕಾರು ಚಾಲಕ ಕಾರ್ತಿಕ್ ಪತ್ನಿ ಜೊತೆಗೆ ಜಿಲ್ಲಾ ಎಸ್ಪಿ ಕಛೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ತಮಗೆ ಸೇರಿದ ೧೩ ಎಕರೆ ಭೂಮಿಯನ್ನ ತಾವು ಹೇಳಿದವರಿಗೆ ಮಾರಾಟ ಮಾಡಲು ಕೂಡಿಹಾಕಿ ಕಿರುಕುಳ ಮತ್ತು ಹಲ್ಲೆ ಆರೋಪ. ಮಾರ್ಚ್ ೧೨. ರಂದು ಮಾತನಾಡುವ ಸಲುವಾಗಿ ಕರೆಸಿ ಮೂರು ದಿನ ಕೂಡಿ ಹಾಕಿ ಕಿರುಕುಳ ಕೊಡಲಾಗಿದೆ ಎಂಬುದು ದೂರು.
ಕಿರಣ್ ರೆಡ್ಡಿ ಎಂಬುವವರ ಹೆಸರಿಗೆ ಭೂಮಿ ಬರೆದು ಕೊಡುವಂತೆ ಬಲವಂತವಾಗಿ ಕ್ರಯ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲಾಗಿದೆ ಎಂಬುದರ ಬಗ್ಗೆ ಕಾರ್ತಿಕ್ ಆರೋಪ. ಬಲವಂತವಾಗಿ ಸಹಿ ಹಾಕಿಸಿಕೊಂಡು ಕ್ರಯಮಾಡಿಸಿಕೊಂಡು ೪೧ ಲಕ್ಷ ಹಣವನ್ನು ತಮ್ಮ ಖಾತೆಯಿಂದ ತೆಗೆಯಲಾಗಿದೆ ಎಂಬುದು ದೂರಾಗಿದೆ.
ಹೆಚ್ಚುತ್ತಲೇ ಇದೆ PM ಮೋದಿ ಕ್ರೇಜ್ – 2 ಕೋಟಿ ಚಂದಾದಾರರ ಸಂಖ್ಯೆ ದಾಟಿತು ಯೂಟ್ಯೂಬ್ ಚಾನೆಲ್
ಭವಾನಿ ರೇವಣ್ಣ ಹಲ್ಲೆಯಿಂದ ತನ್ನ ಪತ್ನಿಗೆ ಗರ್ಭಪಾತವಾದ ಬಗ್ಗೆಯೂ ಕಾರ್ತಿಕ್ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಸಂಬಂದ ಎಸ್ಪಿಗೆ ದೂರು ನೀಡಲು ಆಗಮಿಸಿದ ಕಾರ್ತಿಕ್ ದಂಪತಿ ತಮ್ಮ ವಕೀಲ ದೇವರಾಜೇಗೌಡ ಜೊತೆಯಲ್ಲಿ ಆಗಮಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಅವರಿಗೆ ಮನವಿ ಸಲ್ಲಿಸಿದರು.