ಕೋಲಾರ:-ರಾಹುಲ್ ಗಾಂಧಿ ಅವರ ಅಜ್ಜ ಅಜ್ಜಿ ಅಮ್ಮ ಯಾರು ಬಂದರೂ ಬಿಜೆಪಿ ಸೋಲಿಸಲು ಆಗೋಲ್ಲ ಎಂಬ ಮುನಿಸ್ವಾಮಿ ಹೇಳಿಕೆಗೆ ಶಾಸಕ ಕೆ ವೈ ನಂಜೇಗೌಡ ಟಕ್ಕರ್ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಂಸದ ಮುನಿಸ್ವಾಮಿ ಆಕಸ್ಮಿಕವಾಗಿ ಬಂದವರು. ಗಾಳಿಗೆ ಬಂದಂತಹವರು,ಇತಿಹಾಸ ಗೊತ್ತಿಲ್ಲದವರು. ಸಂಸದರು ಎಂದರೆ ಏನೂಂತ ಗೊತ್ತಿಲ್ಲದವರು ಬಂದಾಗ ಈ ರೀತಿಯ ಭಾಷೆ ಬರುತ್ತದೆ. ಸಂಸದ ಸ್ಥಾನ ನಮ್ಮ ಮಾಲೂರು ಕ್ಷೇತ್ರದಲ್ಲಿತ್ತು,ಒಂದು ಅವಕಾಶ ಸಿಕ್ಕಿತ್ತು. ಈ ಭಾರಿ ಅವರಿಗೇ ಇಲ್ಲಿ ಟಿಕೇಟ್ ನ್ನೆ ಕೊಟ್ಟಿಲ್ಲ. ಯಾಕೆ ಹೀಗೆಲ್ಲ ಮಾತಾಡ್ತಾರೋ ಗೊತ್ತಿಲ್ಲ. ರಾಹುಲ್ ಗಾಂಧಿ ಅಜ್ಜಿಗೆ ಇತಿಹಾಸ ಇದೆ,ರಾಹುಲ್ ಗಾಂಧಿ ಅಜ್ಜನ ಇತಿಹಾಸ ಇದೆ. ಮುನಿಸ್ವಾಮಿ ಯವರ ಇತಿಹಾಸ ಏನು. ರಾಹುಲ್ ಗಾಂಧಿ ಕುಟುಂಬದ ಬಗ್ಗೆ ಮಾತನಾಡುವಷ್ಟು ದೊಡ್ಡವರಲ್ಲ
ಬೇರೆಯವರ ಬಗ್ಗೆ ಮಾತನಾಡುವುದಕ್ಕೆ ಮೊದಲು ನಾನು ಏನು ಎಂದು ತಿಳಿದುಕೊಂಡರೆ ಗೌರವ ಇರುತ್ತದೆ. ಆ ಗೌರವವೇ ಇಲ್ಲ ಅವರಿಗೆ ಎಂದು ಕೋಲಾರದ ಮಾಲೂರಿನಲ್ಲಿ ಶಾಸಕ ನಂಜೇಗೌಡ ಹೇಳಿಕೆ ನೀಡಿದ್ದಾರೆ.