ಚಿತ್ರದುರ್ಗ : ಜಿಲ್ಲೆಗೆ ಮತ್ತೊಂದು ಜವಾಹರ್ ನವೋದಯ ವಿದ್ಯಾಶಾಲೆ ಮಂಜೂರಾತಿ ನೀಡಬೇಕೆಂದು ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರಿಗೆ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಗೋವಿಂದ ಎಂ.ಕಾರಜೋಳ ಅವರು ಇಂದು ಮನವಿ ಸಲ್ಲಿಸಿದ್ದಾರೆ. ದೆಹಲಿಯಲ್ಲಿ ಇಂದು ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ರವರನ್ನು ಭೇಟಿ ಮಾಡಿ, ಚಿತ್ರದುರ್ಗ ಜಿಲ್ಲೆಗೆ ಕೇಂದ್ರೀಯ ವಿದ್ಯಾಶಾಲೆ ಮಂಜೂರು ಮಾಡಿದ್ದಕ್ಕೆ
ಅಭಿನಂದನೆ ಸಲ್ಲಿಸಿ, ನಂತರ, ಜಿಲ್ಲೆಗೆ ಇನ್ನೊಂದು ಜವಾಹರ್ ನವೋದಯ ವಿದ್ಯಾಶಾಲೆ ಮಂಜೂರು ಮಾಡುವಂತೆ ಪ್ರಸ್ಥಾವನೆ ಸಲ್ಲಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 1987 ರಿಂದ ಹಿರಿಯೂರು ತಾಲ್ಲೂಕಿನ ಉಡುವಳ್ಳಿಯಲ್ಲಿ ಜವಾಹರ್ ನವೋದಯ ವಿದ್ಯಾಶಾಲೆ ಕಾರ್ಯನಿರ್ವಹಿಸುತ್ತಿದೆ. ಆದರೆ, ಚಿತ್ರದುರ್ಗ ಜಿಲ್ಲೆ ಶೈಕ್ಷಣಿಕವಾಗಿ ಅತಿ ಹಿಂದುಳಿದಿದ್ದು, ಇಲ್ಲಿನ ಜನರ ಆರ್ಥಿಕ ಜೀವನ ಮಟ್ಟ ತೃಪ್ತಿದಾಯಕವಾಗಿಲ್ಲ, ಇಲ್ಲಿ ಕೃಷಿಕರ ಬದುಕು ಕೂಡ ಮಳೆಯನ್ನೇ ನೆಚ್ಚಿಕೊಂಡಿರುವುದರಿಂದ
ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ.
ನಾನ್ʼಸ್ಟಿಕ್ ಪಾತ್ರೆಗಳಿಂದ ಅಡುಗೆ ಮಾಡಿದರೆ ಕ್ಯಾನ್ಸರ್ ಬರುತ್ತಾ..? ಇಲ್ಲಿದೆ ಉತ್ತರ
ಅತಿ ಹೆಚ್ಚು ಪರಿಶಿಷ್ಟ ಜಾತಿ /ಪಂಗಡ ಹಾಗೂ ಯಾದವ ಜನಾಂಗದವರು ವಾಸಿಸುತ್ತಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಈ ಜನಾಂಗದವರಿಗೆ ಕಷ್ಟವಾಗಿದೆ. ವರ್ಷಪೂರ್ತಿ ದುಡಿಯಲು ಕೈಯಲ್ಲಿ ಕೆಲಸವಿದಲ್ಲದೇ ವರ್ಷದಲ್ಲಿ ನಾಲ್ಕದು ತಿಂಗಳು ಮಲೆನಾಡು ಭಾಗಕ್ಕೆ ಈ ಭಾಗದ ಜನರು ಕೆಲಸ ಆರಸಿಕೊಂಡು ಗುಳೆ ಹೋಗುತ್ತಾರೆ.
ಇಂತಹ ಶೋಚನೀಯ ಸ್ಥಿತಿಯಲ್ಲಿರುವ ಜನರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಸಾಧ್ಯವಾಗದಂತಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಇನ್ನೊಂದು ನವೋದಯ ವಿದ್ಯಾಶಾಲೆಯನ್ನು ಮಂಜೂರು ಮಾಡಿಕೊಡುವಂತೆ ಪ್ರಸ್ಥಾವನೆ ಸಲ್ಲಿಸಿದ್ದಾರೆ. ಮನವಿ ಸ್ವೀಕರಿಸಿದ ಸಚಿವರು ಈ ಬಗ್ಗೆ ಸಕರಾತ್ಮಕ ನಿಲುವು ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ :
ಹನುಮಂತರಾಜು ಚಿತ್ರದುರ್ಗ