ನವದೆಹಲಿ: ಸಂಸತ್ನಲ್ಲಿನ (Parliament) ಭದ್ರತಾ ಲೋಪದ (Security Breach) ವಿರುದ್ಧ ಸದನದ ಬಾವಿಗಿಳಿದು ಪ್ರತಿಭಟಿಸಿ ಅಶಿಸ್ತನ್ನು ತೋರಿದ ಆರೋಪದ ಮೇಲೆ ತೃಣಮೂಲ (TMK) ಸಂಸದ ಡೆರೆಕ್ ಒಬ್ರಿಯಾನ್ (Derek O’Brien) ಅವರನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಗಿದೆ. ಅಶಿಸ್ತಿನ ನಡವಳಿಕೆಯ ಕಾರಣ ನೀಡಿ ಡೆರೆಕ್ ಒಬ್ರಿಯಾನ್ ಅವರನ್ನು ಸಭಾಪತಿ ಜಗದೀಪ್ ಧನ್ಕರ್ (Jagdeep Dhankhar) ಅಮಾನತುಗೊಳಿಸಿದ್ದು, ಅಧಿವೇಶನದ ಉಳಿದ ಭಾಗಕ್ಕೆ ಹಾಜರಾಗದಂತೆ ಆದೇಶಿಸಿದ್ದಾರೆ. ಸಂಸತ್ ಭವನದ ಮೇಲೆ ದಾಳಿ ಮಾಡಿದ ಘಟನೆಗೆ ಸಂಬಂಧಿಸಿ ಇಡೀ ದಿನ ಚರ್ಚೆಗೆ ಅವಕಾಶ ನೀಡುವಂತೆ ಟಿಎಂಸಿ ಸಂಸದ ಪ್ರತಿಭಟನೆ ಆರಂಭಿಸಿದ್ದಾರೆ.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸದನದ ಬಾವಿಗಿಳಿದು ಪ್ರತಿಭಟಿಸಿದ ಡೆರೇಕ್ ಒಬ್ರಿಯಾನ್ ನಿಯಮ ಉಲ್ಲಂಘಿಸಿ ನಡೆದುಕೊಂಡಿದ್ದಾರೆ. ಸಭಾಪತಿ ಜಗದೀಪ್ ಧನ್ಕರ್ ನಿಯಮ ಪಾಲಿಸುವಂತೆ ಹಲವು ಭಾರಿ ಎಚ್ಚರಿಕೆ ನೀಡಿದರೂ ಡೆರೇಕ್ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳದೇ ಪ್ರತಿಭಟನೆ ಮುಂದುವರಿಸಿದ್ದಾರೆ. ಸಭಾಪತಿ ಮಾತನ್ನು ಧಿಕ್ಕರಿಸಿದ ಡೆರೇಕ್ ಒಬ್ರಿಯಾನ್ ಈ ವಿಚಾರದಲ್ಲಿ ಯಾವುದೇ ನಿಯಮ ಗೌರವಿಸುವುದಿಲ್ಲ ಎಂದಿದ್ದಾರೆ. ದುರ್ನಡತೆ, ಅಶಿಸ್ತಿನ ನಡೆಯಿಂದ ಕೆರಳಿದ ಸಭಾಪತಿ ತಕ್ಷಣವೇ ಸದನದಿಂದ ಹೊರನಡೆಯಲು ಸೂಚಿಸಿದ್ದಾರೆ.
Mohammad Shami: ವೇಗಿ ಮೊಹಮ್ಮದ್ ಶಮಿ ಫಾರ್ಮ್ ಹೌಸ್ಗೆ ಬಿಗಿ ಭದ್ರತೆ!
ಬಳಿಕ ಅಮಾನತು ನಿರ್ಧಾರ ಘೋಷಿಸಿದ್ದಾರೆ. ಡೆರೇಕ್ ಒಬ್ರಿಯಾನ್ ಜೊತೆ ಹಲವು ಸಂಸದರು ಪ್ರತಿಭಟನೆ ನಡೆಸಿದ್ದಾರೆ. ಡೆರೇಕ್ ಪ್ರತಿಭಟನೆಗೂ ಮೊದಲು ಸಭಾಪತಿ ಜಗದೀಪ್ ಧನ್ಕರ್, ಉನ್ನತ ಮಟ್ಟದ ತನಿಖೆ ಭರವಸೆ ನೀಡಿದ್ದರು. ಭದ್ರತಾ ಲೋಪ ವಿಚಾರದಲ್ಲಿ ತನಿಖೆ ನಡೆಯಲಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದರು. ಆದರೆ ಡೆರೇಕ್ ಪ್ರತಿಭಟನೆ ಮುಂದುವರಿಸಿದ ಕಾರಣ ರಾಜ್ಯಸಭೆಯಿಂದ ಅಮಾನತಾಗಿದ್ದಾರೆ.