ಯುಗಾದಿ ಹಬ್ಬಕ್ಕೆ ಸಿಹಿ ತಿಂಡಿಗಳ ಪಟ್ಟಿಯಲ್ಲಿ ಬಾಯಲ್ಲಿ ನೀರೂರಿಸುವ ಕರ್ಚಿಕಾಯಿಯನ್ನು ಸೇರಿಸಬಹುದು.
ಕರ್ಚಿಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು:
* ಒಂದು ಕಪ್ ನಷ್ಟು ಮೈದಾ ಹಿಟ್ಟು
* ಕಾಲು ಕಪ್ ನಷ್ಟು ರವೆ
* ಬೆಲ್ಲ
* ಮೂರು ಚಮಚದಷ್ಟು ಅಕ್ಕಿ ಹಿಟ್ಟು,
* ಎರಡು ಚಮಚ – ತುಪ್ಪ,
* ನೀರು
* ಎಣ್ಣೆ
ಮಾಡುವ ವಿಧಾನ:
* ಒಂದು ಅಗಲವಾದ ಪಾತ್ರೆಗೆ ಮೈದಾ ಹಿಟ್ಟು, ರವೆ, ಅಕ್ಕಿಹಿಟ್ಟು ಹಾಗೂ ಬಿಸಿ ಮಾಡಿದ ತುಪ್ಪವನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ, ಇದಕ್ಕೆ ಅಗತ್ಯವಿದ್ದಷ್ಟು ನೀರು ಬೆರೆಸಿ ಚೆನ್ನಾಗಿ ನಾದಿಕೊಳ್ಳಿ.
* ಮಿಕ್ಸಿ ಜಾರಿಗೆ ಹುರಿದ ಪುಟಾಣಿ, ತೆಂಗಿನಕಾಯಿತುರಿ ಸೇರಿಸಿ ರುಬ್ಬಿಕೊಂಡು ಸಿಹಿಗೆ ತಕ್ಕಷ್ಟು ಬೆಲ್ಲ ಹಾಕಿ ಮಿಶ್ರಣ ಮಾಡಿಕೊಳ್ಳಿ.
* ಈಗಾಗಲೇ ನಾದಿಕೊಂಡ ಹಿಟ್ಟಿನಿಂದ ಸ್ವಲ್ಪ ಹಿಟ್ಟು ತೆಗೆದು ಉಂಡೆ ಮಾಡಿಕೊಂಡು ಲಟ್ಟಿಸಿಕೊಳ್ಳಿ.
* ಅದರೊಳಗೆ ಪುಟಾಣಿ ಬೆಲ್ಲದ ಹೂರಣವನ್ನು ಹಾಕಿ ಕರ್ಜಿಕಾಯಿ ಆಕಾರದಲ್ಲಿ ಮಡಚಿಕೊಂಡು ಎಣ್ಣೆಯಲ್ಲಿ ಕರಿದರೆ ರುಚಿಕರವಾದ ಕರ್ಜಿಕಾಯಿ ಸವಿಯಲು ಸಿದ್ಧ.