ಉತ್ತರ ಪ್ರದೇಶ: ಇನ್ನು ಕೆಲವೇ ದಿನಗಳಲ್ಲಿ ಶ್ರೀರಾಮಮಂದಿರ ಪ್ರಾಣಪ್ರತಿಷ್ಠೆ (RamLalla Pran Pratishtha) ನೆರವೇರಲಿದೆ. ಈ ಐತಿಹಾಸಿಕ ಕ್ಷಣಕ್ಕಾಗಿ ದೇಶ, ವಿದೇಶಗಳಲ್ಲಿ ನೆಲೆಸಿರುವ ರಾಮನ ಭಕ್ತರು ಉತ್ಸುಕರಾಗಿ ಕಾಯುತ್ತಿದ್ದಾರೆ. ಅಂತಹ ಭಕ್ತರಲ್ಲಿ ಮಧ್ಯಪ್ರದೇಶದ (Madhya Pradesh) ದಾತಿಯಾ ಮೂಲದ ಮೌನಿ ಬಾಬಾ ಸಹ ಒಬ್ಬರು. ಇವರು ಕಳೆದ 44 ವರ್ಷಗಳಿಂದ ಶ್ರೀರಾಮಮಂದಿರಕ್ಕಾಗಿ ಊಟ ತ್ಯಜಿಸಿ, ಪ್ರಾಣಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ. ಆದ್ರೆ ಈವರೆಗೂ ಆಹ್ವಾನ ಸಿಗದೇ ನಿರಾಸೆಗೊಂಡಿದ್ದಾರೆ.
ಹೌದು, ಮಧ್ಯಪ್ರದೇಶ ದಾತಿಯಾ ಮೂಲದ ಸಂತರೊಬ್ಬರು, ರಾಮ ಮಂದಿರ ನಿರ್ಮಾಣವಾಗುವವರೆಗೆ ಊಟ ಮಾಡುವುದಿಲ್ಲ ಎಂದು 1980ರಲ್ಲಿ ಮೌನ ಪ್ರತಿಜ್ಞೆ ಮಾಡಿದ್ದರು ಎಂದು ಹೇಳಲಾಗಿದೆ. ಆದ್ರೆ ಈವರೆಗೆ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ಬಾರದೇ ನಿರಾಸೆಗೊಂಡಿದ್ದಾರೆ. ಬುಂದೇಲ್ಖಂಡ್ನ ದಾತಿಯಾ ಮೂಲದ ಮೌನಿ ಬಾಬಾ ಎಂದೇ ಖ್ಯಾತರಾದ ಸಂತರು 1980 ರಲ್ಲಿ ರಾಮ ಮಂದಿರ ನಿರ್ಮಿಸುವವರೆಗೆ ಆಹಾರ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಕಳೆದ 44 ವರ್ಷಗಳಿಂದಲೂ ಊಟ ತ್ಯಜಿಸಿ ಹಣ್ಣು-ಹಂಪಲು ತಿಂದು ಬದುಕುತ್ತಿದ್ದಾರೆ.
Salt in Vastu: ನಿಮ್ಮ ಕುಟುಂಬದಲ್ಲಿ ಆಗ್ತಾ ಇರುವ ಎಲ್ಲಾ ಸಮಸ್ಯೆಗಳಿಗೆ ಉಪ್ಪಿನಿಂದ ಪರಿಹಾರವಿದೆ!
ಜೊತೆಗೆ ಚಪ್ಪಲಿ ಧರಿಸುವುದನ್ನೂ ತ್ಯಜಿಸಿದ್ದಾರೆ. ಇದೀಗ ಮೌನ ವ್ರತ (Mouna Vrata) ಆಚರಿಸಿ 40 ವರ್ಷಗಳಾಗಿವೆ. ಈಗ ಅವರು ಉಪವಾಸ ಮುರಿಯಲು ಅಯೋಧ್ಯೆಗೆ ಹೋಗಲು ಬಯಸುತ್ತಾರೆ. ಆದ್ರೆ ಈವರೆಗೆ ಆಹ್ವಾನ ಸ್ವೀಕರಿಸದೇ ನಿರಾಶರಾಗಿದ್ದಾರೆ. ಸದ್ಯ ಕಳೆದ 30 ವರ್ಷಗಳಿಂದ ಮೌನಿಬಾಬಾ ಅವರ ಆಪ್ತರಾಗಿರುವ ಶಿಕ್ಷಕರೊಬ್ಬರು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ರವಾನಿಸಿದ್ದಾರೆ. ಇದರಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಗೆ ಮೌನಿ ಬಾಬಾ ಅವರನ್ನು ಆಹ್ವಾನಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ.