ಬೆಂಗಳೂರು:– ಮಾತೃಭಾಷೆ ಉರ್ದು ಆಗಿದ್ದರೂ ಇಲ್ಲೋರ್ವ ಮುಸ್ಲಿಂ ಬಾಲಕ ಸಂಸ್ಕೃತದಲ್ಲಿ ಟಾಪರ್ ಆಗಿದ್ದಾನೆ. ಹೀಗಾಗಿ ಮುಸ್ಲಿಂ ಬಾಲಕನ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದ ವಕೀಲ ದೇವರಾಜೇಗೌಡಗೆ ಸಂಕಷ್ಟ… ದೂರು ದಾಖಲು!
ಹೊಂಬೇಗೌಡ ಹೈಸ್ಕೂಲ್ ವಿದ್ಯಾರ್ಥಿಯಾಗಿರುವ ಮಹಮ್ಮದ್ ಫರ್ದೀನ್ ಪಾಷಾ ಅದ್ವಿತೀಯ ಸಾಧನೆ ಮಾಡಿದ್ದಾರೆ. ಮೊದಲ ಭಾಷೆ ಸಂಸ್ಕೃತದಲ್ಲಿ 125ಕ್ಕೆ 125 ಅಂಕ ಗಳಿಸಿದ್ದಾರೆ.
ಮಹಮ್ಮದ್ ಫರ್ದೀನ್ ಪಾಷಾ ಕನ್ನಡ, ಹಿಂದಿ, ಉರ್ದು ಬಿಟ್ಟು ಮೊದಲ ಭಾಷೆಯನ್ನಾಗಿ ಸಂಸ್ಕೃತ ಆಯ್ದುಕೊಂಡಿದ್ದರು. ತರಗತಿಯಲ್ಲಿದ್ದ 38 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಇಡೀ ಶಾಲೆಗೆ ಫಸ್ಟ್ ಬಂದಿದ್ದಾರೆ. ಸಂಸ್ಕೃತದಲ್ಲೇ ಉನ್ನತ ವ್ಯಾಸಾಂಗ ಅಭ್ಯಾಸ ಮಾಡಬೇಕು ಎಂಬ ಆಸೆ ಹೊಂದಿದ್ದಾರೆ. ನಿನ್ನೆ ಎಸ್ ಫಲಿತಾಂಶ ಪ್ರಕಟವಾಗಿದೆ. ಒಟ್ಟು 8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 6,31,204 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಪ್ರಥಮ ಸ್ಥಾನ ಪಡೆದುಕೊಂಡರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ರಾಜ್ಯದ 78 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ