ಮಂಡ್ಯ ; ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಂಡ್ಯದಲ್ಲಿ ತಾಯಿ, ಮಗ ಇಬ್ಬರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂದು ವಿರೋಧ ಪಕ್ಷದ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮೃತಪಟ್ಟ ಪ್ರೇಮಾ ಪ್ರೇಮಾ ನಿವಾಸಕ್ಕೆ ಭೇಟಿ ನೀಡಿದರು. ಮಳವಳ್ಳಿಯ ಕೊನ್ನಾಪುರ ಗ್ರಾಮದಲ್ಲಿರುವ ಪ್ರೇಮಾ ಅವರ ನಿವಾಸಕ್ಕೆ ಭೇಟಿ ನೀಡಿದ ಆರ್.ಅಶೋಕ್ , ಮೃತ ಪ್ರೇಮಾ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು.
https://www.youtube.com/watch?v=FeN39ogNQo8
ಇದೇ ವೇಳೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಕರ್ನಾಟಕದ ಬಡವರ ಎದೆ ಸೀಳುತ್ತಿದೆ. ಜನವರಿಯಲ್ಲೆ ಸಿದ್ದರಾಮಯ್ಯ ಹೇಳಿದ್ರು ಸುಘ್ರೀವಾಜ್ಞೆ ಜಾರಿಗೆ ತರುತ್ತೇವೆ ಅಂತಾ ಆದರೆ ತರಲಿಲ್ಲ. ಸಾಲಕ್ಕೆ ಹೆದರಬೇಡಿ ಅಂತ ಸಿಎಂ ಹೇಳಿದ್ರು, ಸಾಲಕ್ಕೆ ಹೆದರಿ ಕರ್ನಾಟಕದಲ್ಲಿ ಒಂದು ಲಕ್ಷ ಜನ ಓಡಿ ಹೋಗಿದ್ದಾರೆ. ಇಲ್ಲಿ ತಾಯಿ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡವರ ಪರ ಅಂತೀರಾ ಸಿದ್ದರಾಮಯ್ಯ ನಿನಗೆ ಕಣ್ಣು ಕಿವಿ ಇದ್ಯಾ ಎಂದು ಪ್ರಶ್ನಿಸಿದರು.ಈ ಕುಟುಂಬಕ್ಕೆ ಸಾಂತ್ವಾನ ಹೇಳೋಕೆ ಶಾಸಕರು, ಸಿಎಂ ಯಾರು ಬಂದಿಲ್ಲ. ಅಶೋಕ ಯಾವುದೋ ಒಂದು ಮನೆಗೆ ಹೋಗಿ ಬಂದುಬಿಟ್ಟಿದ್ಧಾನೆ ಅಂತ ಸಿದ್ದರಾಮಯ್ಯ ಹೇಳ್ತಾರೆ, ನಾನು ಇಲ್ಲಿ 24 ಮನೆಗೆ ಭೇಟಿ ನೀಡಿದ್ದೇನೆ ಎಂದರು. ಮಂಡ್ಯದಲ್ಲಿ 60 ಮೈಕ್ರೋ ಫೈನಾನ್ಸ್ ಕಂಪನಿ ಇವೆ. ಇದರಲ್ಲಿ 18 ಮಾತ್ರ ಅಧಿಕೃತ, ಇನ್ನುಳಿದಿದ್ದು ಅನಧಿಕೃತವಾಗಿವೆ ಎಂದು ಆರೋಪಿಸಿದರು.