ಮಹದೇವಪುರ: ಜನ ಸೇವೆಯೇ ಜನಾರ್ದನನ ಸೇವೆ ಎಂದು ಅರಿತಿದ್ದ ಮೃತ ಮಗ ದಿ. ಚಂದ್ರಶೇಖರ್ ಮನದಾಸೆಯಂತೆ ತಾಯಿ ಪ್ರೇಮಮ್ಮ ಸೇವಾ ಕಾರ್ಯಗಳನ್ನು ಮಾಡಲು ಪ್ರರಂಭಿಸಿದ್ದಾರೆ.
ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ ಮಾಡಲು ನೋಂದಣಿ ಆರಂಭ: ಶಿವಾನಂದ ಪಾಟೀಲ್!
ಕ್ಷೇತ್ರದ ಕಾಡುಬಿಸನಹಳ್ಳಿ ಗ್ರಾಮದಲ್ಲಿ ಶಾಸಕ ಅರವಿಂದ ಲಿಂಬಾವಳಿ ಆತ್ಮೀಯರಾದ ದಿ. ಚಂದ್ರಶೇಖರ್ ರೆಡ್ಡಿ ಅವರ ಜನ್ಮದಿನ ಅಂಗವಾಗಿ ಪೌರ ಕಾರ್ಮಿಕರಿಗೆ ಸಮವಸ್ತ್ರ, ಸ್ಥಳೀಯರಿಗೆ ಅನ್ನದಾನ, ಆಶ್ರಮಕ್ಕೆ ಅಗತ್ಯ ವಸ್ತುಗಳ ಪುರೈಕೆ ಮಾಡಲಾಯಿತು.
ಇದೇವೇಳೆ ಪೌರಕಾರ್ಮಿಕರಿಗೆ ವಿಶೇಷ ಸಮವಸ್ತ್ರಗಳನ್ನು ನೀಡಿದರು, ಮಕ್ಕಳ ಆಶ್ರಮಕ್ಕೆ ಅಗತ್ಯ ವಸ್ತುಗಳ ಪುರೈಕೆ, ಸಾವಿರಾರು ಜನರಿಗೆ ಅನ್ನದಸೋಹ ಸಹ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಬಾಬುರೆಡ್ಡಿ, ಮುನಿಕೃಷ್ಣ, ಮಂಜುನಾಥ್ ಗೌಡ, ಮೂರ್ತಿ, ಆಶ್ವತ್ ರೆಡ್ಡಿ, ಅಂಬರೀಶ್ ಗುಣ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.