ಕಲಬುರಗಿ: ನದಿಗೆ ಹಾರಿ ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ..ಶಹಬಾದ್ ಸಮೀಪದ ಕಾಗಿಣಾ ನದಿಯಲ್ಲಿ ಘಟನೆ ನಡೆದಿದ್ದು ಸಾವಿಗೆ ಶರಣಾದವರನ್ನ ತಾಯಿ ಸುಮಲತಾ ಮಗಳು ವರ್ಷಾ ಅಂತ ಗುರುತಿಸಲಾಗಿದೆ.
ಮೃತರು ಕಲಬುರಗಿಯ ಎಂಬಿ ನಗರ ನಿವಾಸಿಗಳಾಗಿದ್ದು ನಿನ್ನೆ ಸಂಜೆ ಮನೆ ಬಿಟ್ಟಾದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ..