ಬೆಂಗಳೂರು:- ನಗರದ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ನಾಗೊಂಡನಹಳ್ಳಿಯ ಶ್ರಿನಿಧಿ ಅಲಯನ್ಸ್ ಅಪಾರ್ಟ್ಮೆಂಟ್ ನಲ್ಲಿ ಗ್ಯಾಸ್ ಲೀಕ್ ಮಾಡಿ ತಾಯಿ ಮತ್ತು ಮಗು ಆತ್ಮಹತ್ಯೆಗೆ ಯತ್ಮಿಸಿದ ಘಟನೆ ಜರುಗಿದೆ.
ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ ತನ್ನ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಪತಿ ಕೆಲಸಕ್ಕೆ ಹೋಗಿದ್ದ ವೇಳೆ ಡೋರ್ ಲಾಕ್ ಮಾಡಿಕೊಂಡಿದ್ದು, ಕುಟುಂಬಸ್ಥರು ಎಷ್ಟೇ ಬಡಿದರೂ ಬಾಗಿಲನ್ನ ತೆಗೆಯದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಘಟನೆ ತಿಳಿದುಬಂದ ಕೂಡಲೇ ಕುಟುಂಬಸ್ಥರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದದ್ದು, ಘಟನಾ ಸ್ಥಳಕ್ಕೆ ವೈಟ್ ಪೀಲ್ಡ್ ಅಗ್ನಿಶಾಮಕ ಠಾಣೆ ಸಿಬ್ಬಂದಿ ದೌಡಾಯಿಸಿ ಬಾಗಿಲು ಹೊಡೆದು ತಾಯಿ ಮಗುವನ್ನ ರಕ್ಷಿಸಿದ್ದಾರೆ.