ಬೆಂಗಳೂರು:- ಇಂದು ಮೋಸ್ಟ್ ವಾಂಟೆಡ್ 6 ನಕ್ಸಲ್ ಶರಣಾಗತಿ ಆಗಲಿದ್ದಾರೆ.
ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ಸಿಗುತ್ತಾ!?: ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇನು
ಈಗಾಗಲೇ ಶಾಂತಿಗಾಗಿ ನಾಗರೀಕ ವೇದಿಕೆ ಹಾಗೂ ಶರಣಾಗತಿ ಕಮಿಟಿ ಸದಸ್ಯರು ಕಾಡಿಗೆ ತೆರಳಿ ಮನವೋಲಿಸಿದ್ದಾರೆ. ಶಿವಮೊಗ್ಗದ ಶ್ರೀಪಾಲ್ ಸೇರಿ ಹಲವರು ನಕ್ಸಲರನ್ನ ಕಾಡಿನಲ್ಲಿ ಮನವೊಲಿಸಿ ಮುಖ್ಯವಾಹಿನಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ
ಈ ಬಗ್ಗೆ ಚಿಕ್ಕಮಗಳೂರಲ್ಲಿ ನಕ್ಸಲ್ ನಾಯಕಿ ಮುಂಡಗಾರು ಲತಾ ಪ್ರತಿಕ್ರಿಯಿಸಿದ್ದು, ಸರ್ಕಾರ ನಮ್ಮ ಬೇಡಿಕೆಗೆ ಒಪ್ಪಿರುವ ಹಿನ್ನೆಲೆ ಶರಣಾಗುತ್ತಿದ್ದೇವೆ. ನಾವು ಸಮಾಜದ ಮುಖ್ಯವಾಹಿನಿಗೆ ಬರುತ್ತೇವೆ. ನಮ್ಮ ಬೇಡಿಕೆಯನ್ನ ಎರಡು ಸಮಿತಿ ಸರ್ಕಾರಕ್ಕೆ ತಲುಪಿಸಿದೆ. ನಾವು ಪ್ರಜಾತಾಂತ್ರಿಕ ಸಾಂವಿಧಾನಿಕ ಹೋರಾಟ ಮಾಡುತ್ತೇವೆ. ಕೊನೆ ವರೆಗೂ ಜನರ ಪರ ನಿಂತು ಹೋರಾಟ ಮಾಡುತ್ತೇವೆ. ಯಾವ ಕಾರಣಕ್ಕೂ ಜನಪರ ಹೋರಾಟದಿಂದ ಹಿಂದೆ ಸರಿಯಲ್ಲ. ನಮ್ಮ ಉಸಿರು ಇರುವವರೆಗೂ ನಾವು ಹೋರಾಟ ಮಾಡುತ್ತೇವೆ.ನಾವೆಲ್ಲರೂ ನಾಳೆ ನಿಮ್ಮ ಮುಂದೆ ಬರುತ್ತೇವೆ ಎಂದು ಸ್ಪಷ್ಟಪಡಿಸಿದರು.