ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಗೆ ನಿರೀಕ್ಷೆ ಹೆಚ್ಚುತ್ತಿದ್ದಂತೆ, ಮಹತ್ವದ ಬೆಳವಣಿಗೆಯೊಂದು ನಡೆದಿದೆ. ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ ಮೋರ್ನೆ ಮಾರ್ಕೆಲ್ (Morne Morkel), ಟೀಮ್ ಇಂಡಿಯಾಗೆ (Team India) ಹೊಸ ಬೌಲಿಂಗ್ ಕೋಚ್ ಆಗಿ ಸೇರಿಕೊಂಡಿದ್ದಾರೆ.
ಬಾಬರ್ ಆಝಮ್ ಕ್ರಿಕೆಟ್ ಜೀವನದಲ್ಲಿ ದೊಡ್ಡ ಸಾಧನೆ ಮೆರೆಯಲಿದ್ದಾರೆಂದ ದಿಗ್ಗಜ ಬ್ಯಾಟರ್
ಈ ಖುಷಿ ವಿಚಾರವನ್ನು ಬಿಸಿಸಿಐ (BCCI) ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಮೊದಲ ಟೆಸ್ಟ್ ಸೆ.19 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.
ಮೋರ್ನೆ ಮಾರ್ಕೆಲ್ ಆಗಮನವು ಟೀಮ್ ಇಂಡಿಯಾಕ್ಕೆ ಹೊಸ ಅಧ್ಯಾಯದ ಸೂಚಕವಾಗಿದೆ. ಆಗಸ್ಟ್ನಲ್ಲಿ ನೇಮಕಗೊಂಡ ಮಾರ್ಕೆಲ್ ಈ ಹಿಂದೆ ಪರಾಸ್ ಮಾಂಬ್ರೆ ವಹಿಸಿದ್ದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಅವರ ನೇಮಕಾತಿಯು ಭಾರತದ ವೇಗದ ಬೌಲಿಂಗ್ನಲ್ಲಿ ಸುಧಾರಣೆ ತರುವ ಉದ್ದೇಶದ್ದಾಗಿದೆ. ಇದು ಮುಂಬರುವ ಟೆಸ್ಟ್ ಋತುವಿನಲ್ಲಿ ನಿರ್ಣಾಯಕವಾಗಿದೆ.
ಮಾರ್ಕೆಲ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ದಕ್ಷಿಣ ಆಫ್ರಿಕಾಕ್ಕಾಗಿ 86 ಟೆಸ್ಟ್ ಪಂದ್ಯಗಳು, 117 ODIಗಳು ಮತ್ತು 44 T20I ಪಂದ್ಯಗಳನ್ನು ಆಡಿದ್ದಾರೆ. ಎಲ್ಲಾ ಮಾದರಿಯಲ್ಲೂ 544 ವಿಕೆಟ್ಗಳನ್ನು ಕಿತ್ತು ಅಂತಾರಾಷ್ಟ್ರೀಯ ದಾಖಲೆ ಬರೆದಿದ್ದಾರೆ.