ಬೆಂಗಳೂರು:- 2023 ರಲ್ಲಿ ಬೆಂಗಳೂರು ಸಂಚಾರ ಪೊಲೀಸರು ದಾಖಲಿಸಿರುವ ಪ್ರಕರಣಗಳು, ಈ ಬಾರಿ ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತಗಳು, ಅದರಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ ಮತ್ತು ಸಂಚಾರ ಪೊಲೀಸರು ಸಂಗ್ರಹಿಸಿದ ದಂಡದ ಮೊತ್ತ ಎಷ್ಟು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
2023ರಲ್ಲಿ 89,74,945 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 184.83 ಕೋಟಿ ರೂ. ದಂಡವನ್ನು ಬೆಂಗಳೂರು ಸಂಚಾರಿ ಪೊಲೀಸರು ವಸೂಲಿ ಮಾಡಿದ್ದಾರೆ. ಸಿಸಿಕ್ಯಾಮರಾ ಪರಿಶೀಲಿಸಿ 87,25,321 ಸಂಚಾರಿ ನಿಯಮ ಉಲ್ಲಂಘನೆ ಕೇಸ್, ಸಂಚಾರಿ ಪೊಲೀಸರು ಖುದ್ದಾಗಿ ದಾಖಲಿಸಿದ ಕೇಸ್ಗಳ ಸಂಖ್ಯೆ 2,49,624.
7,055 ಡ್ರಂಕ್ & ಡ್ರೈವ್ ಕೇಸ್ ದಾಖಲು ಮಾಡಿದ್ದು, ಮದ್ಯಪಾನ ಮಾಡಿ ಅಪಘಾತ ಆರೋಪದಡಿ 16 ಪ್ರಕರಣ ದಾಖಲು ಮಾಡಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಕೇಸ್ನಲ್ಲಿ 184.83 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.
2023ರಲ್ಲಿ ಬೆಂಗಳೂರಿನಲ್ಲಿ ಒಟ್ಟು 4,095 ಅಪಘಾತ ಪ್ರಕರಣ ಸಂಭವಿಸಿದೆ. 4,095 ಅಪಘಾತದಲ್ಲಿ 909 ಜನರ ಸಾವನ್ನಪ್ಪಿದ್ದರೆ, 4201 ಜನರು ಗಾಯಗೊಂಡಿದ್ದಾರೆ. ತುರ್ತು ಸಂದರ್ಭದಲ್ಲಿ ರೋಗಿಗಳ ಸ್ಥಳಾಂತರಕ್ಕೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿದೆ. 2023ರಲ್ಲಿ ಸಂಚಾರಿ ಪೊಲೀಸರು 22 ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.
ವರ್ಷ ಮಾರಣಾಂತಿಕ ಅಪಘಾತ ಕೇಸ್ ಮೃತಪಟ್ಟವರ ಸಂಖ್ಯೆ
2023: 794 823
2022: 751 771
ವರ್ಷ ಮಾರಣಾಂತಿಕವಲ್ಲದ ಅಪಘಾತ, ಗಾಯಗೊಂಡವರು, ಅಪಘಾತ ಸಂಖ್ಯೆ
2023: 3705 3802 4499