ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳೆ ದಿನನಿತ್ಯ ಹೊಸ ಹೊಸ ದಾಖಲೆ ಬರೆಯುತ್ತಿದೆ. ಮಹಾಕುಂಭ ಮೇಳ ಅಂತ್ಯಕ್ಕೆ ಕೇವಲ 16 ದಿನ ಬಾಕಿ ಇವೆ. ಫೆಬ್ರವರಿ 26ಕ್ಕೆ ಅಂತ್ಯವಾಗಲಿದೆ.
ದೇಶದ ಸುಮಾರು ಮೂರನೇ ಒಂದು ಭಾಗ ಜನಸಂಖ್ಯೆ ಕಳೆದ ಇಷ್ಟು ದಿನಗಳಲ್ಲಿ ಪ್ರಯಾಗ್ರಾಜ್ಗೆ ಭೇಟಿ ನೀಡಿ ಹೋಗಿದೆ. ಕೇವಲ 45 ದಿನಗಳಲ್ಲಿ ಇಷ್ಟೊಂದು ಭಕ್ತರು ಗಂಗೆಯಲ್ಲಿ ಮಿಂದು ಹೋಗಿದ್ದಾರೆ. ಮಹಾಕುಂಭ ಮುಗಿಯಲು ಇನ್ನೂ 16 ದಿನಗಳು ಬಾಕಿ ಇವೆ.
ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಸಾಧು-ಸಂತರನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದಾರೆ. ಫೆ.26 ರ ವರೆಗೆ ಕುಂಭಮೇಳ ನಡೆಯಲಿದೆ.
ಹಾರ್ಟ್ ಅಟ್ಯಾಕ್ ತಡೆಯಲು ಈ ಬೀಜವೇ ಮದ್ದು: ನೀರಲ್ಲಿ ನೆನಸಿಟ್ಟು ತಿಂದ್ರೆ ಶುಗರ್-ಬಿಪಿ ಸಹ ಇರತ್ತೆ ಕಂಟ್ರೋಲ್!
144 ವರ್ಷಗಳ ಬಳಿಕ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಜ.13 ರಿಂದ ಕುಂಭಮೇಳ ಆರಂಭವಾಗಿದೆ. ಆಧ್ಯಾತ್ಮ, ಭಕ್ತಿ-ಭಾವದ ಕೇಂದ್ರವಾಗಿರುವ ಕುಂಭಮೇಳಕ್ಕೆ ದೇಶ-ವಿದೇಶಗಳಿಂದ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಹರಿದುಬರುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಈವರೆಗೆ 43 ಕೋಟಿ ಜನರು ಅಮೃತ ಸ್ನಾನ ಮಾಡಿದ್ದಾರೆ.