ಹುಬ್ಬಳ್ಳಿ; ಮಿಸ್ಡ್ ಕಾಲ್ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನ 72 ಗಂಟೆಗಳ ಅವಧಿಯಲ್ಲಿಯೇ 1ಕೋಟಿ ಐದು ಲಕ್ಷ ಸದಸ್ಯತ್ವ ಮಾಡಿರುವುದು ನಿಜಕ್ಕೂ ಭಾರತೀಯ ಜನತಾ ಪಕ್ಷದ ಜನಪ್ರಿಯತೆಯನ್ನು ಪ್ರಸ್ತುತ ಪಡಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಮುಡಾ ಹಗರಣ ತಿರುಚಲು ಕೋವೀಡ್ ಭ್ರಷ್ಟಾಚಾರ ಬಯಲಿಗೆ ಎಳೆತಾ ಇಲ್ಲ: ಸಚಿವ ಪಾಟೀಲ್
ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಅಭಿಯಾನವನ್ನು ಕಾಂಗ್ರೆಸ್ಸಿನವರು ಲೇವಡಿ ಮಾಡಿದ್ದರು. ಆದರೇ ಈಗ ಅವರು ಕೂಡ ಇದನ್ನೇ ಅನುಸರಿಸುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಪಕ್ಷ ಎಂಬುವುದನ್ನು ಈ ಸದಸ್ಯತ್ವ ಅಭಿಯಾನದ ಮೂಲಕ ವಿರೋಧ ಪಕ್ಷಗಳಿಗೆ ಪ್ರತ್ಯುತ್ತರ ರೀತಿಯಲ್ಲಿ ತೋರಿರುವುದು ವಿಶೇಷವಾಗಿದೆ ಎಂದರು.
ದೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಕೂಡ ಪ್ರಧಾನಮಂತ್ರಿ ಅವರಿಗೆ ಮಿಸ್ಡ್ ಕಾಲ್ ಸದಸ್ಯತ್ವದ ಮೂಲಕ ಚಾಲನೆ ನೀಡಿದ್ದು, ಎಲ್ಲಾ ಕಾರ್ಯಕರ್ತರು ಮುತುವರ್ಜಿಯಿಂದ ಸದಸ್ಯತ್ವ ಅಭಿಯಾನ ನಡೆಸಬೇಕಿದೆ ಎಂದು ಅವರು ಹೇಳಿದರು.