ನವದೆಹಲಿ: ಭಾರತದ ಮಾಜಿ ಪ್ರಧಾನಿ ತಮ್ಮ 92ನೇ ವಯಸ್ಸಿನಲ್ಲಿನಿಧನರಾಗಿದ್ದಾರೆ. ಇನ್ನೂ ಇದೀಗ UPAಗಿಂತ NDA ಕಾಲದಲ್ಲೇ ಅಧಿಕ ಉದ್ಯೋಗಸೃಷ್ಟಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 2014-15ರಲ್ಲಿ 47.15 ಕೋಟಿ ಇದ್ದ ಉದ್ಯೋಗಕ್ಕೆ ಹೋಲಿಸಿದರೆ 2023-24ರಲ್ಲಿ ಶೇ.36ರಷ್ಟು ಏರಿಕೆಯಾಗಿದ್ದು, ಎನ್ಡಿಎ ಅವಧಿಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸೂಖ್ ಮಾಂಡವಿಯಾ ತಿಳಿಸಿದ್ದಾರೆ.
2004-2014ರ ನಡುವಿನ ಕಾಂಗ್ರೆಸ್ ನೇತೃತ್ವದ ಆಡಳಿತದೊಂದಿಗೆ ದತ್ತಾಂಶವನ್ನು ಹೋಲಿಸಿದ ಸಚಿವರು, ಯುಪಿಎ ಅಧಿಕಾರಾವಧಿಯಲ್ಲಿ ಭಾರತದಲ್ಲಿ ಉದ್ಯೋಗವು ಕೇವಲ 7 ಪ್ರತಿಶತದಷ್ಟು ಬೆಳೆದಿದೆ. 2.9 ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬ್ಯಾಟರಿ ತೆಗೆಯಲು ಸಾಧ್ಯವಿಲ್ಲದ ಮೊಬೈಲ್ ಹ್ಯಾಂಗ್- ಸ್ಲೋ ಆಗ್ತಿದ್ಯಾ..? ಹಾಗಿದ್ರೆ ಈ ಟಿಪ್ಸ್ ಪಾಲಿಸಿ
ಮೋದಿ ಸರ್ಕಾರದ ಅಡಿಯಲ್ಲಿ, 2014-24 ರ ನಡುವೆ 17.19 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ದೇಶದಲ್ಲಿ ಸುಮಾರು 4.6 ಕೋಟಿ ಉದ್ಯೋಗಗಳು ಇವೆ ಎಂದು ಮಾಂಡವಿಯಾ ಹೇಳಿದ್ದಾರೆ. ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ನೀಡಿರುವ ಈ ಮಾಹಿತಿಯು ಮಹತ್ವದ್ದಾಗಿದೆ.