ಹಾವೇರಿ: ಲೋಕಾಯುಕ್ತರ ಸಂಸ್ಥೆ ಎಷ್ಟು ಬೇಗ ಕ್ಲೀನ್ಚೀಟ್ ಅನ್ನೋದು ವಿಚಾರ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಲೋಕಾಯುಕ್ತರ ಸಂಸ್ಥೆ ಎಷ್ಟು ಬೇಗ ಕ್ಲೀನ್ಚೀಟ್ ಅನ್ನೋದು ವಿಚಾರ ಮಾಡಿದೆ. ರಾಜ್ಯದ ಮುಖ್ಯಮಂತ್ರಿ ಆರೋಪಿ ಸ್ಥಾನದಲ್ಲಿದ್ದಾರೆ. ನ್ಯಾಯಾಲಯಕ್ಕೆ ಗೌರವಕ್ಕೆ ಕೊಡಬೇಕು. ಅವರು ನ್ಯಾಯವಾದಿ ಸಹ ಗೌರವ ಕೊಡಬೇಕು. ನ್ಯಾಯಾಲಯದ ತೀರ್ಪಿಗೆ ಗೌರವ ಕೊಡಬೇಕು ಎಂದರು.
ಮೈಸೂರಿನಲ್ಲಿ ಒಂದು ಮನೆ ಇಲ್ಲ ಎನ್ನುವ ಕಾರಣಕ್ಕಾಗಿ ಶ್ರೀಮತಿ ಹೆಸರಿನಲ್ಲಿ 14 ಸೈಟ್ ತೆಗೆದುಕೊಂಡಿದ್ದಾರೆ. ಲೋಕಾಯುಕ್ತರು ತರಾತುರಿಯಲ್ಲಿ ವಿಚಾರ ಮಾಡಿ ಕ್ಲೀನ್ ಚೀಟ್ ಕೊಡಲು ದಿನೇಶ ಅನ್ನೋ ಅಧಿಕಾರಿಯನ್ನ ಬಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯ ಭಂಡರಿದ್ದಾರೆ. ಅವರಿಗೆ ಆತಂಕ ಕಾಡುತ್ತಿದೆ. ಈಗ ಗೌರವ ಹರಾಜು ಆಗಿದೆ. ಹಾಗಾಗಿ ಮುಖ್ಯಮಂತ್ರಿಗಳು ವಿಚಲಿತರಾಗಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.
ಪಿಯುಸಿ ಪಾಸ್ ಆದವರಿಗೆ ಗುಡ್ ನ್ಯೂಸ್: ಕರ್ನಾಟಕ ಲೋಕಾಯುಕ್ತದಲ್ಲಿದೆ ಭರ್ಜರಿ ಉದ್ಯೋಗಾವಕಾಶ – ಇಂದೇ ಅರ್ಜಿ ಸಲ್ಲಿಸಿ
ಸಿಎಂ ಸಿದ್ದರಾಮಯ್ಯ ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ ಸಿಬಿಐ ವಹಿಸಿಬೇಕಿತ್ತು. ಐದು ವರ್ಷ ಅಧಿಕಾರ ಪೂರ್ಣಗೊಳಿಸುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ತಿರ್ಮಾನ ಮಾಡಿದೆ. ಮುಖ್ಯಮಂತ್ರಿ ಕೆಳಗೆ ಇಳಿಸಲು ದೆಹಲಿಯಲ್ಲಿ ಮೂಹರ್ತ ಫಿಕ್ಸ್ ಆಗಿದೆ ಎಂದು ವಿಜಯೇಂದ್ರ ಭವಿಷ್ಯ ನುಡಿದರು.
ಕೋವಿಡ್ ಸಮಯದಲ್ಲಿ ಹೆಣಗಳಿಂದಲೂ ಬೊಮ್ಮಾಯಿ ಲಂಚ ತಗೊಂಡಿದಾರೆ ಎಂಬ ಸಿದ್ದರಾಮಯ್ಯ ಆರೋಪ ವಿಚಾರ ಕುರಿತಂತೆ ಮಾತನಾಡಿದ ಅವರು, ಅವರದೇ ಸರ್ಕಾರ ಇದೆ ಅಲ್ವಾ?ಇಷ್ಟು ದಿನ ಏನ್ ಮಾಡ್ತಿದ್ರು? ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎಷ್ಟು ವರ್ಷ ಆಗಿದೆ? ಕೊರೋನಾ ಲೂಟಿ ಅಗಿದ್ದರೆ ತನಿಖೆ ಮಾಡಬೇಕಿತ್ತು. ಅದು ಬಿಟ್ಟು ಹಿಟ್ ಆ್ಯಂಡ್ ರನ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.