ಬೆಂಗಳೂರು: ವಿದೇಶದಲ್ಲಿ ಹೆಚ್ಚು ಆರ್ಭಟಿಸುತ್ತಿರುವ ಮಂಕಿಪಾಕ್ಸ್ ನಿಂದ ಎಚ್ಚೆತ್ತ ಆರೋಗ್ಯ ಇಲಾಖೆ ವೈರಸ್ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಬೆಂಗಳೂರಿನಲ್ಲಿ ಮಂಕಿಪಾಕ್ಸ್ಗೆ ಟೆಸ್ಟಿಂಗ್, ಟ್ರ್ಯಾಕಿಂಗ್ ಮತ್ತು ಸ್ಕ್ರೀನಿಂಗ್ ಶುರು ಮಾಡಲಾಗಿದೆ.
ನಾಗಮಂಗಲ ಗಲಭೆ ಕೇಸ್: ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಹಿಂದೂ ಜನಜಾಗೃತ ಸಮಿತಿ ಒತ್ತಾಯ!
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಪಾಸಿಟಿವ್ ಕಂಡುಬಂದ ದೇಶದಿಂದ ಬರುವ ಪ್ರಯಾಣಿಕರನ್ನು ಟೆಸ್ಟಿಂಗ್ಗೆ ಒಳಪಡಿಸಲು ತಿಳಿಸಿದೆ. ಮಂಕಿಪಾಕ್ಸ್ ಗುಣಲಕ್ಷಣಗಳು ಇದ್ದರೆ ಐಸೊಲೇಷನ್ನಲ್ಲಿ ಇಡಲು ತಿಳಿಸಲಾಗಿದೆ. ಸಿಲಿಕಾನ್ ಸಿಟಿಗೆ ದಿನನಿತ್ಯ ಬೇರೆ ದೇಶದಿಂದ ಬರುವ ನೂರಾರು ಪ್ರಯಾಣಿಕರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಹೀಗಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇನ್ಮುಂದೆ ಶಂಕಿತರ ಟ್ರ್ಯಾಕಿಂಗ್ ಮಾಡಲಾಗುತ್ತದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸರ್ವೈಲೆನ್ಸ್ ಆಫೀಸರ್ಗಳ ನೇಮಕ ಮಾಡಿದ್ದು ಏರ್ ಪೋರ್ಟ್ನಲ್ಲಿ ಟೆಸ್ಟಿಂಗ್ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಮಂಕಿಪಾಕ್ಸ್ ಗುರುತಿಸಲು ಹಾಗೂ ಅದನ್ನ ಟ್ರಾಕಿಂಗ್ ಟೆಸ್ಟಿಂಗ್ ಮಾಡಲು ಆರೋಗ್ಯ ಸಿಬ್ಬಂದಿಗೆ ತರಬೇತಿ ಕೂಡಾ ನೀಡಲಾಗುತ್ತಿದ್ದು, ಟಾಸ್ಕ್ ಫೋರ್ಸ್ ತಜ್ಞರ ಸಲಹೆ ಮೇರೆಗೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ತಿಳಿಸಿದ್ದಾರೆ.
ಮಂಕಿಪಾಕ್ಸ್ ಗುಣಲಕ್ಷಣಗಳೇನು?
ದೇಹದ ಮೇಲೆ ಗುಳ್ಳೆ ಥರದ ದದ್ದುಗಳು
ಮೈ ಮೇಲೆ ಗುಳ್ಳೆಗಳ ಜತೆ ಜ್ವರ
ತೀವ್ರವಾದ ತಲೆನೋವು
ಬೆನ್ನು ನೋವು, ಸ್ನಾಯು ಸೆಳೆತ
2 ವಾರದಿಂದ 4 ವಾರಗಳ ಕಾಲ ಬಾಧಿಸುವ ರೋಗ
ಅಂಗೈ, ಪಾದಗಳ ಮೇಲೆ ವ್ಯಾಪಕವಾದ ದದ್ದುಗಳು