ಕಲಬುರ್ಗಿ:- ಮಂಗಗಳ ಹಾವಳಿ ಹೆಚ್ಚಾಗಿದ್ದು ದಾಳಿಗೆ ಓರ್ವ ಬಾಲಕ ಸೇರಿ ಮೂವರು ಗಾಯಗೊಂಡ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಚಿತ್ತಾಪುರ ತಾಲೂಕಿನ ಬಳವಡಗಿ ಕೊಂಚೂರು ಕಡಬೂರು ಗ್ರಾಮಗಳಲ್ಲಿ ವಾನರ ಸೇನೆ ಅಟ್ಟಹಾಸ ತೋರಿಸುತ್ತಿದೆ..
ಬಳವಡಗಿಯಲ್ಲಿ ಹೊಲಕ್ಕೆ ಹೊರಟಿದ್ದ ಸುಭಾಸ್ ಎಂಬಾತನ ಮೇಲೆ ಹಾಗು ಮನೆಯಿಂದ ಹೊರಗಡೆ ಬಂದಿದ್ದ 16 ವರ್ಷದ ನಿಖಿಲ್ ಎಂಬಾತನ ಮೇಲೆ ಮಂಗಗಳ ಗ್ಯಾಂಗ್ ಅಟ್ಯಾಕ್ ಮಾಡಿದೆ.. ಇದೇವೇಳೆ ಓರ್ವ ಮಹಿಳೆಗೂ ಮಂಗಗಳು ತಲೆಗೆ ಗಾಯಗೊಳಿಸಿವೆ.
ಹೀಗಾಗಿ ಮನೆಯಿಂದ ಹೊರಬರಲು ಜನ ಆತಂಕಗೊಂಡಿದ್ದು ಕೋತಿಗಳ ಕಾಟ ತಪ್ಪಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ…