ಬಿಗ್ ಬಾಸ್ ವಾರದಿಂದ ವಾರಕ್ಕೆ ಹಲವು ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ. ಈ ವಾರ ಮಿಡ್ ಮೀಕ್ ಎಲಿಮಿನೇಷನ್ ಇರಲಿದೆ ಎಂದು ಈ ಮೊದಲು ಘೋಷಿಸಲಾಗಿತ್ತು. ಅದಕ್ಕಾಗಿ ಹಲವು ಟಾಸ್ಕ್ಗಳನ್ನು ನೀಡಲಾಗಿತ್ತು. ಎಲಿಮಿನೇಷನ್ನಿಂದ ಪಾರಾಗಲು ಎಲ್ಲಾ ಸ್ಪರ್ಧಿಗಳು ಕಷ್ಟಪಟ್ಟು ಟಾಸ್ಕ್ ಆಡಿದರು. ಆದರೆ ಧನರಾಜ್ ಮಾಡಿದ ತಪ್ಪಿನಿಂದ ಎಲ್ಲವೂ ಹಾಳಾಯಿತು. ಹೊಸದಾಗಿ ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ಆದೇಶಿಸಿದ್ದರು. ಎರಡನೇ ಬಾರಿ ನಾಮಿನೇಟ್ ಮಾಡಿದಾಗ ಉಗ್ರಂ ಮಂಜು, ಭವ್ಯಾ ಗೌಡ, ಗೌತಮಿ ಜಾದವ್, ರಜತ್, ಧನರಾಜ್ ಆಚಾರ್ ಹಾಗೂ ಮೋಕ್ಷಿತಾ ಪೈ ಹೆಸರುಗಳನ್ನು ತೆಗೆದುಕೊಳ್ಳಲಾಯಿತು.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಾಕಷ್ಟು ಜಗಳ ನಡೆದು, ಹೆಚ್ಚಿನ ಜನರು ಯಾರೂ ನಾಮಿನೇಟ್ ಮಾಡಿಲ್ಲ ಎಂಬ ಕಾರಣದಿಂದ ತ್ರಿವಿಕ್ರಮ್ ಅವರು ಸೇಫ್ ಆದರು. ಹಾಗಾಗಿ ಅವರು ಫಿನಾಲೆ ವಾರಕ್ಕೆ ಎಂಟ್ರಿ ಪಡೆದರು. ಇದರ ಹೊರತಾಗಿ ಕ್ಯಾಪ್ಟನ್ ಹನುಮಂತನಿಗೆ ಒಂದು ವಿಶೇಷ ಅಧಿಕಾರ ನೀಡಲಾಯಿತು. ನಾಮಿನೇಟ್ ಆದ ಒಬ್ಬರನ್ನು ಸೇಫ್ ಮಾಡಲು ಅವರಿಗೆ ಅವಕಾಶ ನೀಡಲಾಯಿತು.
ಹನುಮಂತ ಅವರು ಗೆಳಯ ಧನರಾಜ್ ಹೆಸರು ಹೇಳಬಹುದು ಎಂದು ಅನೇಕರು ಊಹಿಸಿರಬಹುದು. ಆದರೆ ಹನುಮಂತ ಮೋಕ್ಷಿತಾ ಅವರನ್ನ ಸೇವ್ ಮಾಡಿದರು. ‘ಮೋಕ್ಷಿತಾ ಚೆನ್ನಾಗಿ ಆಡುತ್ತಿದ್ದಾರೆ. ಹಾಡು ಹೇಳಿ ಮನರಂಜನೆ ನೀಡುತ್ತಾರೆ. ಒಳ್ಳೆಯ ಮನಸ್ಸಿನ ವ್ಯಕ್ತಿ. ಕಲ್ಮಶ ಇಲ್ಲ. ತಪ್ಪನ್ನು ಒಪ್ಪಿಕೊಳ್ಳುತ್ತಾರೆ’ ಎಂಬ ಕಾರಣವನ್ನು ನೀಡಿ ಮೋಕ್ಷಿತಾನ ನಾಮಿನೇಷನ್ನಿಂದ ಹನುಮಂತ ಬಚಾವ್ ಮಾಡಿದರು.