ಬಿಗ್ ಬಾಸ್ ಸೀಸನ್ 11ರ ಫಿನಾಲೆಗೆ ಇನ್ನೂ ಕೆಲ ವಾರಗಳು ಮಾತ್ರವೇ ಭಾಕಿ ಇದೆ. ಈ ಮಧ್ಯೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಮನೆಯ ಸದಸ್ಯರನ್ನು ಕರೆಸುವ ಮೂಲಕ ಸರ್ಫೈಸ್ ನೀಡಿದೆ. ಅಂತೆಯೇ ಮೋಕ್ಷಿತಾ ಕುಟುಂಬಸ್ಥರು ಬಿಗ್ ಬಾಸ್ ಮನೆಗೆ ಬಂದಿದ್ದು ತಮ್ಮನನ್ನು ಕಂಡು ಮೋಕ್ಷಿತಾ ಕಣ್ಣೀರಿಟ್ಟಿದ್ದಾರೆ. ಅಕ್ಕ ತಮ್ಮನ ಭಾವನಾತ್ಮಕ ಕ್ಷಣಗಳನ್ನು ಕಂಡು ಬಿಗ್ ಬಾಸ್ ಮನೆ ಸದಸ್ಯರು ಹಾಗೂ ವೀಕ್ಷಕರು ಕಣ್ಣೀರು ಸುರಿಸಿದ್ದಾರೆ.
ಹೊಸ ವರ್ಷದಂದು ಮೋಕ್ಷಿತಾ ಫ್ಯಾಮಿಲಿ ಬಿಗ್ ಬಾಸ್ ಮನೆಗೆ ಬಂದಿದೆ. ಪೋಷಕರ ಜೊತೆ ಸಹೋದರನ ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಹೋದರನನ್ನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಹಾಕಿದ್ದು ಈ ವೇಳೆ ಮನೆಯ ಉಳಿದ ಸದಸ್ಯರು ಕಣ್ಣೀರಿಟ್ಟಿದ್ದಾರೆ.
ಸಹೋದರನನ್ನು ನೋಡಿದ ತಕ್ಷಣ ಮೋಕ್ಷಿತಾ ಅಳುತ್ತಾ ಓಡೋಡಿ ಬಂದರು. ಇಷ್ಟು ದಿನ ಬಿಟ್ಟು ಇದ್ದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ನನ್ನನ್ನು ಮರೆತು ಹೋಗಿಬಿಟ್ಟಿದ್ದಾನೆ ಎಂದು ತಮ್ಮನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಸುರಿಸಿದ್ದಾರೆ. ಅವನು ನನ್ನಾ ನೋಡ್ತಾನೇ ಇಲ್ಲ. ನನ್ನನ್ನು ಮರೆತು ಬಿಟ್ಟಿದ್ದಾನೆ ಎಂದು ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಮೋಕ್ಷಿತಾ ಕಣ್ಣೀರು ಹಾಕುತ್ತಿದ್ದಂತೆ ರಜತ್, ಹನುಮಂತು, ಮಂಜು, ಚೈತ್ರಾ, ಗೌತಮಿ, ತ್ರಿವಿಕ್ರಮ್, ಭವ್ಯಾ ಎಲ್ಲರೂ ಫುಲ್ ಸೈಲೆಂಟ್ ಆಗಿದ್ದರು. ಮೋಕ್ಷಿತಾ ಅಳುವುದನ್ನು ನೋಡಿ ತಡೆಯಲಾಗದೇ ಗೌತಮಿ ಕೂಡ ಅತ್ತಿದ್ದಾರೆ.