ಪಾರು ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ನಟಿ ಮೋಕ್ಷಿತಾ ಪೈ ಬಿಗ್ ಬಾಸ್ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಮೋಕ್ಷಿತಾ ನಟನೆಯ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು ಮೋಕ್ಷಿತಾ ಡೀಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಮೋಕ್ಷಿತಾ ಪೈ ನಟನೆಯ ‘ಮಿಡಲ್ ಕ್ಲಾಸ್ ರಾಮಾಯಣ’ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಚಿತ್ರದ ಬಗ್ಗೆ ಮೋಕ್ಷಿತಾ ಪ್ರತಿಕ್ರಿಯಿಸಿದ್ದು, ‘ನಾನು ಮಿಡಲ್ ಕ್ಲಾಸ್ ರಾಮಾಯಣ ಚಿತ್ರದಲ್ಲಿ ಕಪ್ಪು ಬಣ್ಣದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ನಾನು ಕಪ್ಪಿದ್ದರೂ ಹುಡುಗ ನನ್ನನ್ನು ಏಕೆ ಮದುವೆ ಆಗುತ್ತಾನೆ? ಮದುವೆ ಆದ ಮೇಲೆ ಏನೇನು ಆಗುತ್ತದೆ ಎಂಬುದು ಸಿನಿಮಾದ ಕಥೆ. ಬಿಗ್ ಬಾಸ್ಗೂ ಮೊದಲೇ ಇದರ ಶೂಟಿಂಗ್ ಆಗಿತ್ತು. ನಾನು ಬಿಗ್ ಬಾಸ್ಗೆ ಹೋಗಿರಲಿಲ್ಲ ಎಂದರೆ ಸಿನಿಮಾ ಮೊದಲೇ ರಿಲೀಸ್ ಆಗುತ್ತಿತ್ತೇನೋ. ಇನ್ನು ಕೆಲವೇ ತಿಂಗಳಲ್ಲಿ ನಿಮ್ಮ ಮುಂದೆ ಬರುತ್ತದೆ’ ಎಂದಿದ್ದಾರೆ.
‘ಮಿಡಲ್ ಕ್ಲಾಸ್ ರಾಮಾಯಣ’ ಚಿತ್ರದಲ್ಲಿ ಮೋಕ್ಷಿತಾಗೆ ಜೋಡಿಯಾಗಿ ವಿನು ಕಾಣಿಸಿಕೊಂಡಿದ್ದು, ಧನುಷ್ ಗೌಡ ಎಂಬುವವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜಯರಾಮ್ ಗಂಗಪ್ಪನಹಳ್ಳಿ ಈ ಚಿತ್ರದಲ್ಲಿ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ, ನಿರ್ದೇಶಕ ಎಸ್. ನಾರಾಯಣ್ ಅವರು ಮೋಕ್ಷಿತಾ ಅವರ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಬಿಗ್ ಬಾಸ್’ ಪೂರ್ಣಗೊಂಡ ಬಳಿಕ ಹೊಸ ಹೊಸ ಆಫರ್ಗಳು ಹುಡುಕಿ ಬರುತ್ತಿವೆ. ಆದರೆ, ಯಾವುದನ್ನೂ ಅವರು ಫೈನಲ್ ಮಾಡಿಲ್ಲ. ಮನಸ್ಸಿಗೆ ಒಪ್ಪುವಂತಹ ಪಾತ್ರ ಸಿಕ್ಕರೆ ಮಾಡೋದಾಗಿ ಮೋಕ್ಷಿತಾ ಹೇಳಿದ್ದಾರೆ.