ಮಹಾರಾಷ್ಟ್ರ:- ಮಹಾರಾಷ್ಟ್ರದ ಸೋಲಾಪುರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, ಮಹಾರಾಷ್ಟ್ರ ನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ, ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಎಂಟು ಅಮೃತ್ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮಾಡಿದರು.
ಬಳಿಕ ಮಾತನಾಡಿದ ಮೋದಿ, ರಾಜಕೀಯ ಎಂದರೆ ಆರೋಪ-ಪ್ರತ್ಯಾರೋಪಗಳೇ. ಆದರೆ ನಮ್ಮ ದಾರಿ ಅಭಿವೃದ್ಧಿ. ಇದರಿಂದಾಗಿ ದೇಶದ ನಾಲ್ಕು ಕೋಟಿ ಜನರಿಗೆ ಮನೆಗಳನ್ನು ನೀಡಲು ಸಾಧ್ಯವಾಯಿತು. ಈ ಜನರು ಎಷ್ಟು ಸಂತೋಷವಾಗಿದ್ದಾರೆ ಎಂದು ಕೇಳಿ. ದೇಶದಲ್ಲಿ ಬಡತನ ನಿರ್ಮೂಲನೆಯ ಘೋಷಣೆಗಳು ಬಹಳ ಕಾಲ ಮೊಳಗಿದವು. ಆದರೆ ಬಡತನ ಹೋಗಲಿಲ್ಲ. ಏಕೆಂದರೆ ಬಡವರ ಹೆಸರಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆದರೆ ಅದರ ಪ್ರಯೋಜನ ಸರಿಯಾದ ಫಲಾನುಭವಿಗೆ ಸಿಗುತ್ತಿಲ್ಲ. ನೀವು ಅನುಭವಿಸಿದ ಕಷ್ಟಗಳು ಈಗ ನಿಮ್ಮ ಮಕ್ಕಳಿಗೆ ನೋಡಲು ಸಿಗುವುದಿಲ್ಲ. ಗುಡಿಸಲಿನ ಬದಲು ಗಟ್ಟಿಯಾದ ಮನೆಯಲ್ಲಿ ವಾಸಕ್ಕೆ ಅವಕಾಶ ಸಿಗಲಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಭಾರತದ ಅತಿದೊಡ್ಡ ಸೊಸೈಟಿಯನ್ನು ಇಂದು ಸೋಲಾಪುರದಲ್ಲಿ ಉದ್ಘಾಟಿಸಿದ್ದಾರೆ.. ನಾನು ಈ ಮನೆಗಳನ್ನು ನೋಡಿದೆ, ಆಗ ನನಗೆ ಈ ಮನೆಗಳ ಬಗ್ಗೆ ಅಸೂಯೆಯಾಯಿತು. ಚಿಕ್ಕಂದಿನಲ್ಲೇ ಇಂಥದ್ದೊಂದು ಮನೆ ಇದ್ದಿದ್ದರೆ… ಹೀಗೆ ಹೇಳುವಾಗ ನರೇಂದ್ರ ಮೋದಿ ಭಾವುಕರಾದರು. ಮಹಾರಾಷ್ಟ್ರದಲ್ಲಿ ಒಂದು ಲಕ್ಷ ಜನರು ತಮ್ಮ ಹಕ್ಕಿನ ಮನೆಯನ್ನು ಪಡೆಯುತ್ತಿದ್ದಾರೆ. ನಾಲ್ಕು ಕೋಟಿಗೂ ಹೆಚ್ಚು ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ ಎಂದಿದ್ದಾರೆ.