ಕೊಪ್ಪಳ: ಅಂಜನಾದ್ರಿ ಬೆಟ್ಟದಲ್ಲಿ ಇಂದು ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತದೆ.
ಆಂಧ್ರ, ತೆಲಂಗಾಣ ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಹನುಮ ಭಕ್ತರು ಆಗಮಿಸಿದ್ದು ಹನುಮ ಮಾಲಾಧಾರಿಗಳು ಹನುಮ ಮಾಲೆ ವಿಸರ್ಜನೆ ಮಾಡಲಿದ್ದಾರೆ. ಇನ್ನು ಅಂಜನಾದ್ರಿಯಲ್ಲಿ ಜೈ ಶ್ರೀರಾಮ, ಜೈ ಆಂಜನೇಯ ಎಂಬ ಘೋಷವಾಕ್ಯಗಳ ನಡುವೆ ಮೋದಿ, ಪುನೀತ್ ರಾಜ್ಕುಮಾರ್ಗಳ ಘೋಷಣೆಗಳು ಮೊಳಗಿವೆ.
ಸಾವಿರಾರು ಭಕ್ತರು ಪ್ರಧಾನಿ ನರೇಂದ್ರ ಮೋದಿ, ದಿ. ಪುನೀತ್ ರಾಜ್ಕುಮಾರ್ ಭಾವಚಿತ್ರ ಹಿಡಿದು ಅಂಜನಾದ್ರಿಗೆ ಆಗಮಿಸಿದ್ದಾರೆ.
ಅಂಜನಾದ್ರಿ ಬೆಟ್ಟದಲ್ಲಿ ಇಂದು ಹನುಮ ಮಾಲೆ ವಿಸರ್ಜನೆ ನಡೆಯುತ್ತಿದೆ. ಹೀಗಾಗಿ ಹನುಮ ಮಾಲಾಧಾರಿಗಳಷ್ಟೇ ಅಲ್ಲದೆ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದಾರೆ. ಗದಗ ಮತ್ತು ಬೆಳಗಾವಿ ಜಿಲ್ಲೆಗಳಿಂದ ಬಂದಿದ್ದ ಭಕ್ತರು ಮೋದಿ ಮತ್ತು ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಹಿಡಿದು ಜೈಕಾರ ಹಾಕಿದ್ದಾರೆ.