ಅಮರಾವತಿ:- ಮುಂಬೈ ಮೂಲದ ಮಾಡೆಲ್ಗೆ ಕಿರುಕುಳ ನೀಡಿದ ಹಿನ್ನೆಲೆ, ಆಂಧ್ರದ ಮೂವರು ಐಪಿಎಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಡೈರೆಕ್ಟರ್ ಜನರಲ್ ಶ್ರೇಣಿಯ ಒಬ್ಬರು, ಇನ್ಸ್ ಪೆಕ್ಟರ್ ಜನರಲ್ ಮತ್ತು ಸೂಪರಿಂಟೆಂಡೆಂಟ್ ಶ್ರೇಣಿಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪಿಎಸ್ ಆರ್ ಆಂಜನೇಯುಲು, ಕಂಠಿ ರಾಣಾ ಟಾಟಾ ಮತ್ತು ವಿಶಾಲ್ ಗುನ್ನಿ ಅಮಾನತುಗೊಂಡ ಮೂವರು ಹಿರಿಯ ಅಧಿಕಾರಿಗಳಾಗಿದ್ದಾರೆ.
ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ಆಡಳಿತದ ಇರುವಾಗ ನಟಿ ಪೊಲೀಸರಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಆರೋಪಿಸಿದ್ದರು. ಮುಂಬೈನ ಕಾರ್ಪೋರೇಷನ್ನ ಉನ್ನತ ಕಾರ್ಯನಿರ್ವಾಹಕರ ವಿರುದ್ಧ ತಾನು ಈ ಹಿಂದೆ ದಾಖಲಿಸಿದ ಪ್ರಕರಣವನ್ನು ಹಿಂದೆಗೆದುಕೊಳ್ಳಬೇಕು. ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು
ಪೊಲೀಸ್ ಅಧಿಕಾರಿಗಳು ಬೆದರಿಕೆ ಹಾಕಿದ್ದರು. ಅಲ್ಲದೇ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿದ್ದರು ಎಂದು ನಟಿ ಆರೋಪಿಸಿದ್ದರು.
ಆಂಧ್ರಪ್ರದೇಶ ಪೊಲೀಸರು ಆರೋಪಗಳ ವಿಚಾರಣೆ ನಡೆಸಿದ್ದು, ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪ ಮತ್ತು ದುರ್ನಡತೆ ಆರೋಪದಡಿ ಅಮಾನತು ಆದೇಶ ಹೊರಡಿಸಲಾಗಿದೆ.