ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಅಟ್ಟಹಾಸ ಜೋರಾಗಿದ್ದು, ಲಾಂಗ್ ತೋರಿಸಿ ರಾಬರಿ ನಡೆಸಿದ್ದಾರೆ.
ರಂಭಾಪುರಿ ಮಠಕ್ಕೆ ಬಂತು ರೋಬೋಟಿಕ್ ಆನೆ: ಕೊಡುಗೆ ಕೊಟ್ಟವರು ಬಾಲಿವುಡ್ ನಟಿ!
ಲಾಂಗ್ ತೋರಿಸಿ ಮೊಬೈಲ್ ಕಳ್ಳರು ಎಸ್ಕೇಪ್ ಆಗಿದ್ದಾರೆ. ಬೈಕ್ ನಲ್ಲಿ ಮೊಬೈಲ್ ಕಸಿದು ಕಳ್ಳರು ಎಸ್ಕೇಪ್ ಆಗುತ್ತಿದ್ದರು. ಈ ವೇಳೆ ಸ್ಕಾರ್ಪಿಯೋನಲ್ಲಿ ಚೇಸ್ ಮಾಡಿ ಮಾಜಿ ಕಾರ್ಪೋರೇಟರ್ ಗಣೇಶ್ ರೆಡ್ಡಿ ಬೈಕ್ ಗೆ ಗುದ್ದಿದ್ದಾರೆ.
ಬೆಳಗಿನ ಜಾವ 5ರ ವೇಳೆ ಜಿಮ್ ಗೆ ಹೆಚ್ ಬಿಆರ್ ಲೇಔಟ್ ನಲ್ಲಿ ತೆರಳ್ತಿದ್ದ ವೇಳೆ ಘಟನೆ ಜರುಗಿದೆ. ಮೊಬೈಲ್ ಕಳೆದುಕೊಂಡಿದ್ದವರ ಕಾರಿನಲ್ಲಿ ಕೂರಿಸಿಕೊಂಡು ಗಣೇಶ್ ಚೇಸ್ ಮಾಡಿದ್ದಾರೆ.
ಬೈಕ್ ನಲ್ಲಿ ಬೀಳ್ತಿದ್ದಂತೆ ಓಡಿ, ಬಳಿಕ ಲಾಂಗ್ ಹಿಡಿದು ಬಂದು ಬೆದರಿಕೆ ಹಾಕಿದ್ದಾರೆ. ಲಾಂಗ್ ತೋರಿಸಿ ಬೆದರಿಸಿ, ಮೊಬೈಲ್ ಎಸೆದು ಬೈಕ್ ನಲ್ಲಿ ಮೊಬೈಲ್ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಮೊಬೈಲ್ ಕಳ್ಳರ ಚೇಸ್ ಮಾಡಿ, ಬೀಳಿಸಿ, ಲಾಂಗ್ ತೋರಿಸಿ ಬೆದರಿಸುವ ವಿಡಿಯೋ ಸೆರೆಯಾಗಿದೆ. ಸ್ಥಳೀಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿರುವ ದೃಶ್ಯ ಸೆರೆಯಾಹಿದ್ದು, ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದುವರೆಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.