ಬೆಂಗಳೂರು:- ನಗರದಲ್ಲಿ ನಕಲಿ ಆ್ಯಪ್ ಮೂಲಕ ಮೊಬೈಲ್ ಹ್ಯಾಕ್ ಮಾಡುವುದು ಹೆಚ್ಚುತ್ತಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕಡಲನಗರಿ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ನ್ನೇ ಹ್ಯಾಕ್ ಮಾಡಿ ಅವರ ಹೆಸರಿನಲ್ಲೇ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಆರ್ಡರ್ ಮಾಡಿ ವಂಚಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ದೆಹಲಿಯಿಂದ ಆರೋಪಿಯ ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದಾರೆ.
ಬಾಣಂತಿಯರ ಸಾವು ಕೇಸ್: ರಾಜ್ಯ ಸರ್ಕಾರ ಅಲರ್ಟ್, ಐಎಎಸ್ ಅಧಿಕಾರಿ ನೇತೃತ್ವದಲ್ಲಿ ಪರಿಶೀಲನಾ ತಂಡ ರಚನೆ!
ವಾಟ್ಸಪ್ಗೆ ನಕಲಿ ಎಪಿಕೆ ಮಾದರಿಯ ಫೈಲ್ ಕಳುಹಿಸಿ ಪೂರ್ತಿ ಮೊಬೈಲ್ನ್ನೆ ಹ್ಯಾಕ್ ಮಾಡಿ ಅಕೌಂಟ್ಗಳಲ್ಲಿ ಇರುವ ಹಣವನ್ನು ದೋಚಿದ್ದಾರೆ.
ಇದೇ ರೀತಿ ಮಂಗಳೂರಿನ ಯದುನಂದನ್ ಆಚಾರ್ಯ ಎಂಬವರಿಗೂ ಸೈಬರ್ ಖದೀಮರು ವಂಚಿಸಿದ್ದಾರೆ. ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ನಿಮ್ಮ ವಾಹನದ ದಂಡ ಪಾವತಿ ಬಾಕಿ ಇದೆ ಎಂಬ ಮೆಸೇಜ್ ಯದುನಂದನ್ ಅವರಿಗೆ ಕಳುಹಿಸಿದ್ದಾರೆ. ಈ ದಂಡ ಪಾವತಿಗೆ ವಾಹನ್ ಪರಿವಾಹನ್ ಎಂಬ ಸಾರಿಗೆ ಇಲಾಖೆಯ ಆ್ಯಪ್ನ ಎಪಿಕೆ ಫೈಲ್ ಸಹ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಇನ್ಸ್ಟಾಲ್ ಮಾಡಿ ದಂಡ ಪಾವತಿಸುವಂತೆಯೂ ಮೇಸೆಜ್ನಲ್ಲಿ ತಿಳಿಸಲಾಗಿತ್ತು
ಅದರಂತೆ ಯದುನಂದನ್ ಎಪಿಕೆ ಫೈಲ್ ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿದ್ದಾರೆ. ಇನ್ಸ್ಟಾಲ್ ಮಾಡುತ್ತಿದ್ದಂತೆ ಅವರ ಮೊಬೈಲ್ ಸಂಪೂರ್ಣವಾಗಿ ಸೈಬರ್ ವಂಚಕರ ನಿಯಂತ್ರಣಕ್ಕೆ ಹೋಗಿದೆ. ಕೂಡಲೇ ಅವರ ಪ್ಲಿಪ್ಕಾರ್ಟ್ ಖಾತೆ ಹ್ಯಾಕ್ ಆಗಿದೆ. ಸೈಬರ್ ವಂಚಕರು ಅವರ ಪ್ಲಿಪ್ಕಾರ್ಟ್ ಖಾತೆ ಬಳಸಿಕೊಂಡು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳಿಂದ 1.31 ಲಕ್ಷ ರೂ. ಮೌಲ್ಯದ ಎರಡು ಮೊಬೈಲ್ ಪೋನ್, 1 ಇಯರ್ಪಾಡ್ ಮತ್ತು ಗಿಫ್ಟ್ ವೋಚರ್ಗಳನ್ನು ಖರೀದಿಸಿದ್ದಾರೆ.