ಶಿವಮೊಗ್ಗ : ಮಹಿಳಾ ಸರ್ಕಾರಿ ಅಧಿಕಾರಿಗೆ ಎಂಎಲ್ಎ ಮಗ ನಿಂದಿಸಿದ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಹೊರಬಿದ್ದಿದೆ. ಮೊದಲ ದೃಶ್ಯದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಅಧಿಕಾರಿಯನ್ನು ಅಶ್ಲೀಲವಾಗಿ ನಿಂದಿಸಿದ ಮಾತುಗಳು ರೆಕಾರ್ಡ್ ಆಗಿದ್ದರೆ, ಎರಡನೇ ವಿಡಿಯೋದಲ್ಲಿ ಮಹಿಳಾ ಅಧಿಕಾರಿಯು, ಶಾಸಕರ ಪುತ್ರ ತಮ್ಮ ಮೇಲೆ ಲಾರಿ ಹತ್ತಿಸುತ್ತೀರಿ ಎಂದು ಬೆದರಿಕೆ ಹಾಕಿದ ಬಗ್ಗೆ ಮಾತನಾಡಿದ್ದಾರೆ.
ಭದ್ರಾವತಿಯ ಸೀಗಡೆಬಾಗಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಮಹಿಳಾ ಅಧಿಕಾರಿ ಜ್ಯೋತಿ ಎಂಬವರು ರೇಡ್ ನಡೆಸಿದ್ದರು. ಈ ಸಂದರ್ಭದಲ್ಲಿ ಎಂಎಲ್ಎ ಮಗನ ಚೇಲಾಗಳು ಸ್ಥಳಕ್ಕೆ ಬಂದು ಮಹಿಳಾ ಅಧಿಕಾರಿಯ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆನಂತರ ಆಪ್ತರ ಮೊಬೈಲ್ ಮೂಲಕ ಮಾತನಾಡುವ ಎಂಎಲ್ಎಯ ಮಗ ಮಹಿಳಾ ಅಧಿಕಾರಿಯನ್ನು ಹೀನಾಮಾನವಾಗಿ ನಿಂದಿಸಿದ್ದಾರೆ ಎನ್ನಲಾದ ಆಡಿಯೊ ವಿಡಿಯೊ ಮೊದಲು ಹೊರಬಿದ್ದ ವೈರಲ್ ವಿಡಿಯೋದಲ್ಲಿ ಕೇಳುತ್ತಿದೆ.
ಇದೀಗ ಹೊರಬಿದ್ದಿರುವ ಇನ್ನೊಂದು ವಿಡಿಯೋದಲ್ಲಿ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಉಲ್ಲೇಖವಿದೆ. ಲಾರಿ ಹತ್ತಿಸುವ ಬೆದರಿಕೆ ಹಾಕ್ತೀದ್ದೀರಿ ಎಂದು ಅಧಿಕಾರಿ ಮಾತನಾಡಿದ್ದು, ಜನರನ್ನು ಕಳುಹಿಸುತ್ತೇನೆ ಎಂಬ ಆಡಿಯೋ ರೆಕಾರ್ಡ್ ಆಗಿದೆ.