ಧಾರವಾಡ;- ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ 55ನೇ ಹುಟ್ಟ ಹಬ್ಬ ಹಿನ್ನೆಲೆ ವಿನಯ ಕುಲಕರ್ಣಿ ಅಭಿಮಾನಿಗಳಿಂದ ಅದ್ದೂರಿ ಕಾರ್ಯಕ್ರಮ ಜರುಗಿದೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ಹೊರವಲಯದಲ್ಲಿ ಕಾರ್ಯಕ್ರಮ ವೇದಿಕೆ ಕಡೆ ಅಭಿಮಾನಿಗಳು ಹರಿದು ಬರುತ್ತಿದ್ದಾರೆ. ಬೃಹತ್ ಸೇಬು ಹಾರ ಹಾಕಿ ಸ್ವಾಗತ ಮಾಡಲು ಅಭಿಮಾನಿಗಳಂದ ಸಿದ್ಧತೆ ನಡೆದಿದೆ.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಸೇರಿ ಹಲವು ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.
ಧಾರವಾಡ ಜಿಲ್ಲಾ ಪ್ರವೇಶಕ್ಕೆ ನ್ಯಾಯಾಲಯ ನಿರ್ಬಂಧ ಹಿನ್ನೆಲೆ ಅಭಿಮಾನಿಗಳಿಂದ ಕಿತ್ತೂರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.