ಪೀಣ್ಯ ದಾಸರಹಳ್ಳಿ: ಸಮೀಪದ ಚಿಕ್ಕಬಾಣಾವರದ ಸಂತೆ ಸರ್ಕಲ್ ಬಳಿ ಲೋಕೋಪಯೋಗಿ ವಿಶೇಷ ಅನುದಾನದಲ್ಲಿ ರಸ್ತೆ ಡಾಂಬರೀಕರಣಕ್ಕೆ ಶಾಸಕ ಎಸ್. ಮುನಿರಾಜು ಚಾಲನೆ ನೀಡಿದರು.
ಬಳಿಕ ಎಸ್. ಮುನಿರಾಜು ಮಾತನಾಡಿ’ ಈ ಭಾಗದಲ್ಲಿ ಇನ್ನು ಅನೇಕ ರಸ್ತೆಗಳಿಗೆ ಡಾಂಬರೀಕರಣ ಆಗಿಲ್ಲ, ಈಗ ಅನುದಾನದ ಕೊರತೆ ಇದೆ. ಹಂತ ಹಂತವಾಗಿ ಡಾಂಬರೀಕರಣ ಮಾಡಲಾಗುತ್ತದೆ. ಈ ಭಾಗದಲ್ಲಿ ಅನೇಕ ಸಮಸ್ಯೆಗಳಿವೆ ಎಲ್ಲವನ್ನು ಗಮನಿಸಿದ್ದೇವೆ ಆದಷ್ಟು ಮಟ್ಟಿಗೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ’ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ಉರ್ದು ಶಾಲೆಗೆ ಭೇಟಿ ನೀಡಿ ಅಲ್ಲಿನ ಶಾಲೆಯ ದೋಸ್ತಿಯ ಬಗ್ಗೆ ಪರಿಶೀಲಿಸಿ ಬೃಹತ್ ಮರದ ಒಣಗಿದ ರಂಬೆ ಕೊಂಬೆಗಳನ್ನು ಮಕ್ಕಳಿಗೆ ತೊಂದರೆ ಆಗದ ರೀತಿಯಲ್ಲಿ ಅರಣ್ಯ ಅಧಿಕಾರಿಗಳಿಗೆ ಕತ್ತರಿಸಲು ಸೂಚಿಸಿದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ಚಿಕ್ಕಬಾಣಾವರ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಭಾಗ್ಯಮ್ಮ, ಬಿಜೆಪಿ ಮುಖಂಡ ಕಬೀರ್, ಪುರಸಭೆ ಮುಖ್ಯ ಅಧಿಕಾರಿ ಕುಮಾರ್, ನವೀನ್, ಗಿರೀಶ್ ಮತ್ತು ಸ್ಥಳೀಯರಿದ್ದರು.