ಮಂಡ್ಯ ಗ್ರಾಮಾಂತರ ವ್ಯಾಪ್ತಿಯ ಹನಕೆರೆ ಇಂದ ಇಂಡುವಾಳು ವರೆಗೂ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಆಗುತ್ತಿರುವ ಅಪಘಾತ ತಪ್ಪಿಸಲು ಮಂಡ್ಯ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಟದಿಕಾರಿಗಳು, ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೋಡನೇ ಶಾಸಕರಿಂದ ಸರ್ವಿಸ್ ರಸ್ತೆ ವೀಕ್ಷಣೆ.ಮಂಡ್ಯ ರಾಷ್ಟ್ರಿಯ ಹೆದ್ದಾರಿಯ ಸರ್ವಿಸ್ ರಸ್ತೆಯ ಹನಕೆರೆ, ಕಟ್ಟೆದೊಡ್ಡಿ ಅಂಡರ್ ಪಾಸ್, ಬೂದನೂರು ಅಂಡರ್ ಪಾಸ್,
ಚಳಿಗಾಲದಲ್ಲಿ ಮೂಲಂಗಿ ಸೇವನೆ ಒಳ್ಳೆಯದು, ಆದ್ರೆ ತಪ್ಪಿಯೂ ಈ ಆಹಾರಗಳ ಜೊತೆ ತಿನ್ನಬೇಡಿ!
ಉಮ್ಮಡಹಳ್ಳಿ ಅಂಡರ್ ಪಾಸ್, ಚಿಕ್ಕ ಮಂಡ್ಯ, ಹೊಳಲು ರಸ್ತೆಯ ಅಂಡರ್ ಪಾಸ್ ಹಾಗೂ ಸರ್ವಿಸ್ ರಸ್ತೆ ವೀಕ್ಷಣೆ ಮಾಡಿದ ಮಾನ್ಯ ಶಾಸಕರು ಅಂಡರ್ ಪಾಸ್ ಗಳಲ್ಲಿ ಲೈಟ್ ಹಾಗೂ ಸಿ ಸಿ ಟಿವಿ ಅಳವಡಿಕೆ, ಅವೈಜ್ಞಾನಿಕ ವಾಗಿ ಅಳವಡಿಸಿರುವ ರಸ್ತೆ ಹಂಪ್ ಗಳ ತೆರವುಗೊಳಿಸಲು, ರಸ್ತೆ ಬದಿಯ ಗುಂಡಿ ಗಳನ್ನು ಮುಚ್ಚಿ ರಸ್ತೆ ಅಪಘಾತ ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.