ಹುಬ್ಬಳ್ಳಿ: ಕೊಂಕಣಿ ಮರಾಠಾ ಸಮಾಜದ 40ನೇ ವಾರ್ಷಿಕೋತ್ಸವದ ಕಾರ್ಯಕ್ರಮ ಬನಶಂಕರಿ ಬಡಾವಣೆ ವಿದ್ಯಾನಗರ ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರದ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿದ ಅವರು ಕೊಂಕಣಿ ಮರಾಠಾ ಸಮಾಜ ಬಾಂಧವರು ಶ್ರಮ ಜೀವಿಗಳು ವೃತ್ತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಇತರ ಸಮಾಜಗಳಿಗೆ ಈ ಸಮಾಜವು ಮಾದರಿಯಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇವರೆಲ್ಲರೂ ಪ್ರಬಲ ಹಿಂದುತ್ವವಾದಿಗಳು ದೇಶಭಕ್ತಿ ನಿಷ್ಠೆ ಇವರಲ್ಲಿ ಅಡಗಿದೆ ಈ ಸಮುದಾಯದ ಸಾಕಷ್ಟು ಜನರು ದೇಶದ ದೊಡ್ಡ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದ ಅಧ್ಯಕ್ಷರಾದ ರವಿ ನಾಯ್ಕ್ ನೇತೃತ್ವದಲ್ಲಿ ಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ನಾನು ಯಾವತ್ತು ಸಣ್ಣ ದೊಡ್ಡ ಸಮುದಾಯ ಎಂದು ಪರಿಗಣಿಸುವುದಿಲ್ಲ ಕೊಂಕಣಿ ಬಾಂಧವರಿಗೆ ಹೃದಯವಂತಿಕೆ ಇದೆ ಅದು ನಿಮ್ಮಲ್ಲಿರುವ ದೊಡ್ಡ ಗುಣ ಎಂದು ಹೇಳಿದರು. ದಿನಗಳಲ್ಲಿ ಸಮಾಜಕ್ಕೆ ಬೇಕಾದ ನೆರವು ನೀಡಲು ಪ್ರಯತ್ನಿಸುವುದಾಗಿ ಶಾಸಕ ಮಹೇಶ ಟೆಂಗಿನಕಾಯಿ ಹೇಳಿ ಭರವಸೆ ನೀಡಿದರು.
Nail Cutting: ಸಂಜೆ ವೇಳೆ ಉಗುರು ಕತ್ತರಿಸುತ್ತೀರಾ? ಮನೆಗೆ ಬರುವ ಲಕ್ಷ್ಮೀ ವಾಪಸ್ ಹೋಗಬಹುದು, ಎಚ್ಚರಾ!
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರವಿ ನಾಯ್ಕ್ ವಹಿಸಿ ಮಾತನಾಡಿದ ಅವರು ನಮ್ಮ ಸಮಾಜ ಕಳೆದ 40 ವರ್ಷಗಳಲ್ಲಿ ಸಾಕಷ್ಟು ಸಮಾಜ ಮುಖಿ ಕೆಲಸವನ್ನು ಮಾಡಿದೆ ನಮ್ಮ ಸಮುದಾಯ ದೇಶದೆಲ್ಲೆಡೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ನಮ್ಮ ಸಮುದಾಯ ಸಾಮಾಜಿಕ ಶೈಕ್ಷಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ರವಿ ನಾಯ್ಕ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ರಾಷ್ಟ್ರ ಪತಿ ಪದಕ ವಿಜೇತ ಶ್ರೀಮತಿ ನೀಲಿಮಾ ರಾಣಿ ಹಾಗೂ ಧಾರವಾಡದ ಕೇಸಿಡಿ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಪ್ರಾಚಾರ್ಯರಾದ ಶ್ರೀಮತಿ ಮಂಜಲಿ ಸಾಳುಂಕೆ ಮಾತನಾಡಿ ತಾವು ಮಾಡಿದ ಸಾಧನೆಗಳು ಹಾಗೂ ವ್ಯಕ್ತಿತ್ವವನ್ನು ಹೇಗೆ ಬೆಳೆಸಿ ಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಧಾರವಾಡ ನಿವೃತ್ತ ಜಿಲ್ಲಾಧಿಕಾರಿಗಳಾದ ಶ್ರೀ ಎಸ್ ವಿ ನಾಯ್ಕ್ ರಾಣಿ ಖ್ಯಾತ ಉಪನ್ಯಾಸಕರಾದ ಡಾ. ಸಾವಂತ್, ನಿವೃತ್ತ ಹುಬ್ಬಳ್ಳಿ ಗ್ರಾಮಾಂತರ ತಹಶೀಲ್ದಾರ್ ಶಿವಾನಂದ ರಾಣಿ, ನಿವೃತ್ತ ಪೊಲೀಸ ಅಧಿಕಾರಿ ಅರುಣ್ ಕುಮಾರ್ ಸಾಳುಂಕೆ, ಏಷ್ಯನ್ ಗೇಮ್ಸ್ ಮಾಸ್ಟರ್ ಸ್ಪರ್ಧೆಯಲ್ಲಿ ಶಾರ್ಟ್ ಪುಟ್ ನಲ್ಲಿ ಬಂಗಾರದ ಪದಕ ವಿಜೇತ ಪ್ರಮೋದ್ ನಾಯ್ಕ್, ಸೇರಿದಂತೆ ಸೇವಾ ನಿವೃತ್ತಿ ಹೊಂದಿರುವ ಸಮಾಜದ ಅನೇಕ ಗಣ್ಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಕಾರ್ಯದರ್ಶಿ ಸುರೇಂದ್ರ ಗಾoವ್ಕಕರ ಮಹಿಳಾ ಅಧ್ಯಕ್ಷರಾದ ನಿರ್ಮಲಾ ರಾಣಿ ಅಶೋಕ್ ನಾಯ್ಕ್ ಸದಾನಂದ ನಾಯ್ಕ್ ಸುನಿಲ್ ನಾಯ್ಕ್ ವಿನೋದ್ ಸೈಲ್ ಸಂಜೀವ ಎಸ್ ನಾಯ್ಕ್ ವಿನಾಯಕ ಗಾoವ್ಕಕರ ಸಂಜೀವ ನಾಯ್ಕ್ ಮಾರುತಿ ಪವಾರ ರಾಜಶೇಖರ ನಾಯ್ಕ್ ಮಲ್ಲಿನಾಥ ರಾಣಿ ಮೊದಲಾದವರು ಉಪಸ್ಥಿತರಿದ್ದರು.