ಬಳ್ಳಾರಿ:- ಕೆ.ಆರ್.ಪಿ ಪಕ್ಷದ ಸಂಸ್ಥಾಪನ ಅಧ್ಯಕ್ಷರು ಮತ್ತು ಮಾಜಿ ಸಚಿವರಾದ ಗಾಲಿ ಜನಾರ್ಧನ್ ರೆಡ್ಡಿ ಅವರ 57 ನೇ ಹುಟ್ಟು ಹಬ್ಬವನ್ನು ಬಳ್ಳಾರಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ನಗರದ ತುಂಬೆಲ್ಲ ಅಭಿಮಾನಿಗಳು ಅಳವಡಿಸಿರುವ ಜನ್ಮದಿನದ ಶುಭಾಶಯಗಳನ್ನು ಕೋರುವ ಪ್ಲೇಕ್ಸ್ಗಳು ರಾರಾಜಿಸುತ್ತಿವೆ.
ಜನಾರ್ಧನ್ ರೆಡ್ಡಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಇಂದು ಮುಂಜಾನೆಯಿಂದ ನಗರ ತುಂಬಾ ವಿವಿಧ ಕಾರ್ಯಕ್ರಮಗಳನ್ನು ಕೈಗೊಂಡರು. ಮುಂಜಾನೆ ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ, ಕಾರ್ಯಚಟುವಟಿಕೆಗಳು ಪ್ರಾರಂಭಿಸಿದರು.
ಮುಖ್ಯವಾಗಿ ಬೈಕ್ ರ್ಯಾಲಿ, ವಿವಿಧ ಕಡೆಗಳಲ್ಲಿ ಅನ್ನ ದಾಸೋಹ, ಅನಾಥಾಶ್ರಮಗಳಿಗೆ ಬಟ್ಟೆ, ಹಣ್ಣು ಮತ್ತು ಆಹಾರ ವಿತರಣೆ,ರಕ್ತದಾನ ಶಿಬಿರ ಸೇರಿದಂತೆ ವಿವಿಧ ಸಾಮಾಜಿಕ ಸೇವಾಕಾರ್ಯಗಳನ್ನು ಜನಾರ್ಧನರೆಡ್ಡಿ ಅಭಿಮಾನಿಗಳು ಮತ್ತು ಕೆ.ಆರ್.ಪಿ.ಪಕ್ಷದ ಮುಖಂಡರು ಕೈಗೊಂಡಿದ್ದರು.