ಹುಬ್ಬಳ್ಳಿ:- ಕಿತ್ತೂರು ಕರ್ನಾಟಕದ ಜೀವನದಿ ಮಲಪ್ರಭಾ ನದಿ ದಂಡೆಯಲ್ಲಿರುವ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ Mk ಹುಬ್ಬಳ್ಳಿ ಪಟ್ಟಣದ ಹೊರ ವಲಯದ ಮಲಪ್ರಭಾ ನದಿ ದಂಡೆಯ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳ ಶಿವ ಶರಣೆ ಗಂಗಾಂಬಿಕೆಯವರ ಐಕ್ಯ ಸ್ಥಳ.
ಜಗಜ್ಯೋತಿ ಬಸವಣ್ಣನವರ ಧರ್ಮ ಪತ್ನಿಯಾಗಿ, ಶರಣ ಪರಂಪರೆ ಹಾಗೂ ವಚನ ಸಾಹಿತ್ಯದ ಸ್ಮಾರಕಗಳ ವಿಷಯದಲ್ಲಿ ಪ್ರಮುಖ ಘಟ್ಟ ಇದೇ Mk ಹುಬ್ಬಳ್ಳಿಯ ಈ ಪ್ರವಾಸಿ ಸ್ಥಳ, ಆದ್ರೆ ಅದ್ಯಾಕೋ ಏನೋ ಗೊತ್ತಿಲ್ಲಾ ಮಲಪ್ರಭಾ ನದಿಯ ತೀವ್ರ ಪ್ರವಾಹಕ್ಕೆ ಸಿಲುಕಿ ಸಾಕಷ್ಟು ಶಿಥಿಲಗೊಂಡ ರಸ್ತೆ ಹಾಗೂ ವಿವಿಧ ತಡೆಗೋಡೆಗಳು ತುಂಬಾನೇ ಹದಗೆಟ್ಟಿವೆ, ಇನ್ನೂ ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸಹ ಎದ್ದು ಕಾಡುತ್ತಿದೆ. ವಿಶೇಷ ಎಂದರೇ ಈ ಐಕ್ಯ ಸ್ಥಳವೂ ಸಹ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೇರಿದೆ, ಆದ್ರೆ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಬರೀ ಕೂಡಲ ಸಂಗಮದ ಅಭಿವೃದ್ಧಿಗೆ ಕೊಟ್ಟ ಪ್ರಾಶಸ್ತ್ಯ ಎಂಕೆ ಹುಬ್ಬಳ್ಳಿಗೆ ಮಾತ್ರ ಇಲ್ಲಿಯವರೆಗೂ ಕೊಟ್ಟಿಲ್ಲಾ…!
ಇನ್ನೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿ ಎಂದು ನಿರ್ಮಾಣವಾಗುತ್ತಿರುವ ಪ್ರವಾಸಿ ಮಂದಿರದ ಕಾಮಗಾರಿಯೂ ಅರ್ಧಕ್ಕೆ ನಿಂತು ಬಿಟ್ಟಿದೆ. ಹೀಗೆ ಹತ್ತು ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ಈ ಪ್ರವಾಸಿ ಸ್ಥಳದಲ್ಕಿ ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ನಿಮಿತ್ಯ 3 ದಿವಸಗಳ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಬಾರಿಯೂ ಸಹ ಜಾತ್ರೆ ಹೊಸ್ತಿಲಲ್ಲೇ ಇದೆ. ಆದರೇ ರಸ್ತೆ ಸೇರಿದಂತೆ ವಿವಿಧ ಮೂಲ ಭೂತ ಸೌಕರ್ಯಗಳ ಕೊರತೆ ಮಾತ್ರ ಎದ್ದು ಕಾಡುತ್ತಿದೆ. ಆದ್ದರಿಂದ ಮಾಧ್ಯಮ ಪ್ರತಿನಿಧಿ ಅಲ್ಲಿಗೆ ಭೇಟಿ ಕೊಟ್ಟು ಇಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ಗಂಗಾಂಬಿಕೆ ದೇವಸ್ಥಾನ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹ ಮಾಡಿ, ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಅವರ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಪ್ರವಾಸಿ ಹಾಗೂ ಧಾರ್ಮಿಕ ಪ್ರಮುಖ ಸ್ಥಳದ ಸಮಗ್ರ ಅಭಿವೃದ್ಧಿಗೆ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.