ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಬೊಜ್ಜು ಸೇರಿಕೊಂಡರೆ ಅದು ದೇಹದ ಸೌಂದರ್ಯವನ್ನೇ ಹಾಳು ಮಾಡಿ ಬಿಡುತ್ತದೆ. ಯಾವ ಬಟ್ಟೆ ಧರಿಸಿದರೂ ಅಸಹ್ಯವಾಗಿಯೇ ಕಾಣುತ್ತದೆ. ಈ ಬೊಜ್ಜು ಕರಗಿಸಲು ಸುಲಭ ಉಪಾಯ ಇಲ್ಲಿದೆ.
ಇದ್ದಕ್ಕಿದ್ದಂತೆ ಒಬ್ಬ ಮನುಷ್ಯ ದಪ್ಪ ಆಗಿದ್ದಾನೆ ಎಂದರೆ ಎಲ್ಲರೂ ಮೊದಲು ನೋಡುವುದು ಆತನ ಹೊಟ್ಟೆಯನ್ನು. ಏಕೆಂದರೆ ಈಗಿನ ಕಾಲದಲ್ಲಿ ದಪ್ಪ ಆಗಬೇಕು ಎಂದರೆ ಅದಕ್ಕೆ ಪ್ರಮುಖ ಕಾರಣ ಬೊಜ್ಜು ಆಗಿರುತ್ತದೆ. ಸೊಂಟದ ಸುತ್ತಲೂ ಬೊಜ್ಜು ಶೇಖರಣೆಯಾಗುವುದು ಸಾಮಾನ್ಯ.
ನೀವು ತಯಾರಿಸುವ ಚಹಾದಲ್ಲಿ ಕೆಲವು ಮಸಾಲೆ ಪದಾರ್ಥಗಳನ್ನು ಸೇರಿಸಿದರೆ ಸಾಕು. ಬಲೂನ್ ನಂತೆ ಊದಿರುವ ಡೊಳ್ಳು ಹೊಟ್ಟೆಯೂ ಮಂಜಿನಂತೆ ಕರಗುತ್ತದೆ. ಶುಂಠಿಯಲ್ಲಿರುವ ಪೋಷಕಾಂಶಗಳು ಹಸಿವನ್ನು ನಿಗ್ರಹಿಸುವುದು ಮಾತ್ರವಲ್ಲದೆ ಜಠರಗರುಳಿನ ಉರಿಯೂತವನ್ನೂ ಸಹ ನಿಗ್ರಹಿಸುತ್ತಾಡ್. ಇದು ತೂಕ ಇಳಿಕೆಯಲ್ಲೂ ಪ್ರಯೋಜನಕಾರಿ ಆಗಿದೆ.
ಅರಿಶಿನದಲ್ಲಿ ಕರ್ಕ್ಯುಮೀನ್ ಎಂಬ ಅಂಶವಿದೆ. ಅರಿಶಿನದ ಟೀ ಕೂಡಿಯುವುದರಿಂದ ಇದು ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಪರಿಣಾಮಕಾರಿ ಆಗಿದೆ. ಕಡಿಮೆ ಕ್ಯಾಲೋರಿ ಪಾನೀಯವಾಗಿರುವ ಪುದೀನಾ ಟೀ ಕರುಳಿನ ಆರೋಗ್ಯಕ್ಕೆ ವರದಾನವಿದ್ದಂತೆ, ಇದು ದೇಹದಲ್ಲಿ ಶೇಖರಣೆಯಾಗಿರುವ ಕಠಿಣ ಕೊಬ್ಬನ್ನು ಕರಗಿಸಲು ಸಹಕಾರಿ ಎಂದು ಹೇಳಲಾಗುತ್ತದೆ. ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಗ್ರೀನ್ ಟೀ ಅನ್ನು ದಿನಕ್ಕೆ ಎರಡು ಬಾರಿ ಕುಡಿದರೆ ಸಾಕು ಸುಲಭವಾಗಿ ಬೊಜ್ಜು ಕರಗಿಸಬಹುದು.
ತೂಕ ಇಳಿಕೆ, ಬೊಜ್ಜು ಕರಗಿಸಲು ದಿವ್ಯೌಷಧ ಎಂದು ಪರಿಗಣಿಸಲಾಗಿರುವ ನಿಂಬೆ ರಸದಿಂದ ಚಹಾ ತಯಾರಿಸಿ ಕುಡಿಯುವುದರಿಂದಲೂ ತೂಕ ಇಳಿಕೆ ಸುಲಭವಾಗುತ್ತದೆ.