ವಿಜಯಪುರ: ನೀರು ಎಂದು ತಿಳಿದು ಬಾಟಲ್ನಲ್ಲಿರುವ ಆಸಿಡ್ ಹಾಕಿಕೊಂಡು ಮದ್ಯ ಸೇವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ವಿಜಯಪುರ ನಗರದ ಎಲ್ ಬಿ ಎಸ್ ಮಾರ್ಕೆಟ್ ನಲ್ಲಿರುವ ಬಾರ್ವೊಂದರಲ್ಲಿ ಈ ಘಟನೆ ನಡೆದಿದ್ದು, ಮಹಮ್ಮದ್ ಶಫೀಕ್ ಮನಿಯಾರ (48) ಮೃತಪಟ್ಟ ವ್ಯಕ್ತಿ. ಮಹಮ್ಮದ್ ಶಫೀಕ್ ಮನಿಯಾರ ವಿಜಯಪುರ ನಗರದ ಉಪ್ಪಲಿ ಬುರ್ಜ ನಿವಾಸಿಯಾಗಿದ್ದು, ಬಾರ್ನಲ್ಲಿ ಮದ್ಯ ಸೇವನೆಗೆ ಮಾಡಲು ಬಂದಿದ್ದ. ಈ ವೇಳೆ ಟೇಬಲ್ ಮೇಲೆ ಟೈಲ್ಸ್ ತೊಳೆಯಲು ಇಟ್ಟಿದ್ದ ಆಸಿಡ್ ಬಾಟಲ್ನ್ನು ನೀರಿನ ಬಾಟೆಲ್ ಎಂದು ತಿಳಿದು, ಮದ್ಯದೊಂದಿಗೆ ಬೆರೆಸಿ ಕುಡಿದಿದ್ದಾನೆ. ಇದ್ರಿಂದಾಗಿ ಆಸಿಡ್ ಹಾಕಿ ಕುಡಿದ ಮೇಲೆ ಹೊಟ್ಟೆ ಉರಿ ಉರಿ ಅಂತ ಗೋಳಾಡಿದ್ದ. ಆ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಫಲಕಾರಿಯಾಗದೆ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಕಾಲ್ತುಳಿತ ಪ್ರಕರಣದಲ್ಲಿ ನಾಲ್ವರ ಸಾವು ; ಇಂದು ಸಂಜೆ ವೇಳೆಗೆ ಬೆಳಗಾವಿಗೆ ಮೃತದೇಹ
ಘಟನೆಗೆ ಬಾರ್ ಮಾಲೀಕ, ಸಿಬ್ಬಂದಿ ನಿರ್ಲಕ್ಷ್ಯ ಎಂದು ಆರೋಪಿಸಿ ಮೃತನ ಕುಟುಂಬಸ್ಥರು, ಜಿಲ್ಲಾಧಿಕಾರಿ ಕಚೇರಿ ಎದುರು ಶವವಿಟ್ಟು ಕೆಲಕಾಲ ಪ್ರತಿಭಟನೆ ನಡೆಸಿದರು. ಪೊಲೀಸರು ಮನವೊಲಿಕೆ ಬಳಿಕ ಮೃತದೇಹ ತೆಗೆದುಕೊಂಡು ಅಂತ್ಯಕ್ರಿಯೆಗೆ ತೆರಳಿದ್ದಾರೆ. ಸದ್ಯ ಈ ಸಂಬಂಧ ಮೃತನ ಪತ್ನಿ ಶಾಹೀದಾ ಬಾರ್ ಮಾಲೀಕ, ಮ್ಯಾನೇಜರ್, ವೇಟರ್ ವಿರುದ್ಧ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.