ಬರ್ನ್: ಮಾಜಿ ಮಿಸ್ ಸ್ವಿಜರ್ಲೆಂಡ್ ಫೈನಲಿಸ್ಟ್ಆ ಗಿದ್ದ ಕ್ರಿಸ್ಟಿನಾ ಜೋಕ್ಸಿಮೊವಿಕ್ ಅವರನ್ನು ಆಕೆಯ ಪತಿ ಬರ್ಬರವಾಗಿ ಹತ್ಯೆ ಮಾಡಿದ್ದು, ಪೊಲೀಸ್ ತನಿಖೆಯ ಬಳಿಕ ಆಕೆಯ ಪತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
38 ವರ್ಷದ ಕ್ರಿಸ್ಟಿನಾ ಅವರನ್ನು ಆಕೆಯ ಪತಿ ಕತ್ತುಹಿಸುಕಿ, ಬಳಿಕ ಆಕೆಯನ್ನು ಬ್ಲೆಂಡರ್ ಮೂಲಕ ಕತ್ತರಿಸಿದ್ದಾರೆ. ಆನಂತರ ಆಕೆಯ ದೇಹದ ಭಾಗಗಳನ್ನು ಆಸಿಡ್ನಲ್ಲಿ ಕರಗಿಸುವ ಮೂಲಕ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದರು
ಇದೇ ವರ್ಷ ಫೆಬ್ರವರಿಯಲ್ಲಿ ಜೋಕ್ಸಿಮೊವಿಕ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಬಳಿಕ ಛಿದ್ರಗೊಂಡ ದೇಹವು ಪತ್ತೆಯಾದಾಗ ಈ ಭಯಾನಕ ಅಪರಾಧ ಬೆಳಕಿಗೆ ಬಂದಿದೆ.
ಪೊಲೀಸ್ರಿಂದ ತನಿಖೆಯಾದ ಬಳಿಕ ಆಕೆಯ ಪತಿ ಥಾಮಸ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಥಾಮಸ್ ತನ್ನ ಹೆಂಡತಿಯ ದೇಹವನ್ನು ಗರಗಸ, ಚಾಕು ಮತ್ತು ಗಾರ್ಡನ್ ಕತ್ತರಿಗಳನ್ನು ಬಳಸಿ ಕತ್ತರಿಸಿರುವುದಾಗಿ ಮತ್ತು ರಾಸಾಯನಿಕ ದ್ರಾವಣದಲ್ಲಿ ಭಾಗಗಳನ್ನು ಕರಗಿಸಲು ಹ್ಯಾಂಡ್ ಬ್ಲೆಂಡರ್ ಬಳಸಿರುವುದನ್ನು ಒಪ್ಪಿಕೊಂಡಿದ್ದಾನೆ.
ಕ್ರಿಸ್ಟಿನಾ ಮತ್ತು ಥಾಮಸ್ 2017ರಲ್ಲಿ ಮದುವೆಯಾಗಿದ್ದರು. ಈ ದುರಂತ ಘಟನೆಗೆ ಕೇವಲ ನಾಲ್ಕು ವಾರಗಳ ಮೊದಲು ಕ್ರಿಸ್ಟಿನಾ ಅವರು ತಮ್ಮ ಇತ್ತೀಚಿನ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಅವರಿಬ್ಬರ ಸ್ನೇಹಿತರು, ದಂಪತಿ ನಡುವೆ ಕೆಲವು ದಿನಗಳ ಹಿಂದೆ ವೈಮನಸ್ಸಿತ್ತು ಎಂದು ತಿಳಿಸಿದ್ದಾರೆ.