ಶಿವಮೊಗ್ಗ: ಎಳ್ಳಮಾವಾಸ್ಯೆ ಜಾತ್ರೆಗೆ ಬಂದಿದ್ದ ವ್ಯಾಪಾರಿ ಪುತ್ರ ತುಂಗಾನದಿ ಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬಗ್ಗೆ ತೀರ್ಥಹಳ್ಳಿ ಯಿಂದ ವರದಿಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಯಲ್ಲಿ ಎಳ್ಳಮಾವಾಸ್ಯೆ ಜಾತ್ರೆ ನಡೆಯುತ್ತಿದೆ. ಹೀಗಾಗಿ ವಿವಿಧ ಕಡೆಗಳಿಂದ ವ್ಯಾಪಾರಸ್ಥರು ತೀರ್ಥಹಳ್ಳಿಯ ಬೀದಿಗಳಲ್ಲಿ ಟೆಂಟ್ ಬಳಸಿ ವ್ಯಾಪಾರ ನಡೆಸ್ತಿದ್ದಾರೆ. ಈ ನಡುವೆ ನಿನ್ನೆ ಬುಧವಾರ ತುಂಗಾ ನದಿಯಲ್ಲಿ ಬಾಲಕನೊಬ್ಬ,
Lakshadweep Trip: ಲಕ್ಷದ್ವೀಪದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳು ಯಾವುವು ಗೊತ್ತಾ..?
ಸ್ನಾನಕ್ಕೆ ಹೋದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಜಾತ್ರೆಯಲ್ಲಿ ಊದುವ ಪೀಪಿ ಮಾರಾಲು ಬಂದಿದ್ದ ಬಿಹಾರ ಮೂಲದ ವ್ಯಕ್ತಿಯ ಜೊತೆ ಆತನ ಮಗನು ಬಂದಿದ್ದ ಜಾತ್ರೆಯಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದ ಈತ ನದಿಯಲ್ಲಿ ಸ್ನಾನ ಮಾಡುತ್ತಿದ್ದ, ತಂದೆಯು ಜೊತೆಗಿದ್ದರು. ಈ ಮಧ್ಯೆ ನೀರಿನಲ್ಲಿ ಆಯ ತಪ್ಪಿ ಮುಳುಗಿ ಬಾಲಕ ಸಾವನ್ನಪ್ಪಿದ್ದಾನೆ. ಸದ್ಯ ಅಗ್ನಿಶಾಮಕದಳ ಸಿಬ್ಬಂದಿ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.