ಕಷ್ಟುಪಟ್ಟ ಬೆಳೆದ ರಾಶಿ ಮಾಡಲು ಹೊಲದಲ್ಲಿ ಕುಡಿಟ್ಟ ರೈತನ ಮೆಕ್ಕೆಜೋಳ ತೆನೆಗೆ ದುಷ್ಕರ್ಮಿಗಳು ಮಧ್ಯರಾತ್ರಿ ಬೆಂಕಿ ಹಚ್ಚಿ ವಿಕೃತಿ ಮರೆದ ಘಟನೆ ನವಲಗುಂದದ್ದ ಹನಸಿ ಗ್ರಾಮದಲ್ಲಿ ನಡೆದಲ್ಲಿ. ಸುಮಾರು 2 ಲಕ್ಷಕ್ಲೂ ಅಧಿಕ ಬೆಲೆ ಬಾಳುವ ಮೆಕ್ಕೆಜೋಳ ತೆನೆ ಸುಟ್ಟು ಹಾಳಾಗಿದ್ದು, ದುಷ್ಕರ್ಮಿಗಳ ಅಟಹಾಸಕ್ಕೆ ಚೆನ್ನಪ್ಪ ಹುಡ್ಕೇರಿ ಕುಟುಂಬ ಈಗ ಕಣ್ಣಿರಲ್ಲಿ ಕೈ ತೊಳೆಯುವಮತಾಗಿದೆ. ಇನ್ನೂ ಇಂದು ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು, ಚೆನ್ನಪ್ಪ ಹೊಲಕ್ಲೆ ಹೋಗಿದ್ದಾನೆ.
ಆಗ ಬೆಂಕಿ ವಿಷಯ ಹೊರ ಬಂದಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಐದು ಎಕರೆಯಲ್ಲಿ ಬೆಳದಿದ್ದ ಮೇಕೆಜೋಳವನ್ನು ರೈತ ಚೆನ್ನಪ್ಪ ರಾಶಿ ಮಾಡುವ ಉದ್ದೇಶದಿಂದ ಹೊಲದಲ್ಲಿ ತೆನೆಗಳನ್ನು ಜಮೆ ಮಾಡಿದನ್ನು. ಹೊಲದಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡ ದುಷ್ಕರ್ಮಿ ಖದೀಮರು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಈ ಕುರಿತು ಈಗ ರೈತ ಕುಟುಂಬ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ಜೊತೆಗೆ ಪರಿಹಾರಲ್ಕೆ ಆಗ್ರಹಿಸಿದ್ದಾರೆ. ಇನೂ ಘಟನೆಯ ಕುರಿತು ನವಲಗುಂದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.