ಸ್ಪಿನ್ ಬೌಲಿಂಗ್ ತಂತ್ರವನ್ನು ಮರು ಮೌಲ್ಯಮಾಪನ ಮಾಡುವ ಬಗ್ಗೆ ನಾನು ನೀಡಿದ್ದ ಸಲಹೆಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಮ್ ಹಾಗೂ ಪಿಸಿಬಿ ಕ್ರಿಕೆಟ್ ನಿರ್ದೇಶದ ಮಿಕ್ಕಿ ಆರ್ಥರ್ ಅವರು ನಿರಾಕರಿಸಿದ್ದರು
ಶನಿವಾರ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡ 93 ರನ್ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ರೇಸ್ನಿಂದ ಅಧಿಕೃತವಾಗಿ ಹೊರ ನಡೆಯಿತು. ಒಟ್ಟಾರೆ ಆಡಿದ್ದ 9 ಪಂದ್ಯಗಳಿಂದ 4ರಲ್ಲಿ ಗೆಲುವು ಪಡೆಯುವ ಮೂಲಕ ಬಾಬರ್ ಆಝಮ್ ಪಡೆ 5ನೇ ಸ್ಥಾನದೊಂದಿಗೆ ಏಕದಿನ ವಿಶ್ವಕಪ್ ಟೂರ್ನಿಯ ಅಭಿಯಾನವನ್ನು ಮುಗಿಸಿತು.
ಸಂದರ್ಶನವೊಂದರಲ್ಲಿ ಮಾತನಾಡಿದ ಮಿಸ್ಬಾ ಉಲ್ ಹಕ್, “ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಝಕಾ ಅಶ್ರಫ್ ಅವರು ಏಕದಿನ ವಿಶ್ವಕಪ್ ನಿಮಿತ್ತ ನನ್ನ ಮತ್ತು ಮೊಹಮದ್ ಹಫೀಝ್ ಬಳಿ ಸಲಹೆ ಕೇಳಿದ್ದರು. ಅದರಂತೆ ನಾನು, ಏಷ್ಯಾ ಕಪ್ಗೂ ಮುನ್ನ ಶದಾಬ್ ಖಾನ್ ಮತ್ತು ಮೊಹಮ್ಮದ್ ನವಾಝ್ ಅವರ ಜೊತೆ ಮತ್ತೊಬ್ಬ ಸ್ಪಿನ್ನರ್ ಅಗತ್ಯವಿದೆ ಎಂದು ಹೇಳಿದ್ದೆ,” ಎಂದು ಬಹಿರಂಗಪಡಿಸಿದ್ದಾರೆ.
ಏಷ್ಯಾ ಕಪ್ನಲ್ಲಿ ಪಾಕಿಸ್ತಾನ ವೈಫಲ್ಯದ ಬಳಿಕ ಮೊಹಮ್ಮದ್ ಹಫೀಝ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗಸ್ಟ್ನಲ್ಲಿ ಚೀಫ್ ಸೆಲೆಕ್ಟರ್ ಆಗಿದ್ದ ಇಂಜಮಾಮ್ ಉಲ್ ಹಕ್ ಅಕ್ಟೋಬರ್ನಲ್ಲಿ ತಮ್ಮ ಸ್ಥಾನವನ್ನು ತೊರೆದಿದ್ದರು.