ಬೆಂಗಳೂರು: ದುಬೈನಿಂದ ಕೋಟಿ ಕೋಟಿ ಚಿನ್ನ ಸಾಗಾಟ ಕೇಸಲ್ಲಿ ತಗ್ಲಾಕೊಂಡಿರೋ ಮಾಣಿಕ್ಯ ನಟಿ ರನ್ಯಾ ರಾವ್ ಹಿಂದೆ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳಿದ್ದಾರೆಂಬ ಚರ್ಚೆ ಜೋರಾಗ್ತಿದೆ. ಇದರ ಬೆನ್ನಲ್ಲೇ ರನ್ಯಾ ಹಿಂದೆ ಸಿದ್ದರಾಮಯ್ಯ ಸಂಪುಟದ ಇಬ್ಬರು ಸಚಿವರ ಪಾತ್ರವಿದೆ ಎಂಬ ಸುದ್ದಿ ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡುತ್ತಿದೆ.
ರನ್ಯಾ ರಾವ್ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಪ್ರಭಾವಿ ಸಚಿವರು ಇದ್ದಾರೆ ಎಂಬ ವಿಚಾರ ವಿಧಾನಸಭೆಯಲ್ಲೂ ಸದ್ದು ಮಾಡಿದೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಯಾರು ಆ ಸಚಿವರು ಎಂಬ ವಿಚಾರ ಸ್ಪಷ್ಟ ಪಡಿಸಿ ಎಂದು ಸರ್ಕಾರವನ್ನು ಆಗ್ರಹಿಸಿದ್ರು.
ಸಿಬಿಐ ತನಿಖೆ ಮಾಡ್ತಿದೆ: ಪರಂ
ಸುನೀಲ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ಈ ವಿಚಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ನಮಗೆ ಈ ವಿಚಾರ ಗೊತ್ತಿಲ್ಲ. ನಮಗೂ ಸಹಾ ಪತ್ರಿಕೆಗಳಲ್ಲಿ ನೋಡಿಯೇ ಗೊತ್ತಾಗಿದ್ದು. ಹಾಗಂತ ನಾವು ನೆಗ್ಲೆಕ್ಟ್ ಮಾಡಲ್ಲ. ನಮ್ಮ ಹಂತದಲ್ಲಿ ಏನು ತನಿಖೆ ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಅಂತ ಹೇಳಿದ್ದಾರೆ. ಇದಕ್ಕೆ ನೀವೇ ಸಿಬಿಐಗೆ ಕೊಡಿ ಎಂದು ಸುನಿಲ್ ಕುಮಾರ್ ಆಗ್ರಹಪಡಿಸಿದರು.
ಚಿನ್ನದಂಧೆಯಲ್ಲಿ ಯಾವ ಸಚಿವರಿದ್ದಾರೆ ?
ಇನ್ನು ರನ್ಯಾರಾವ್ ಗೋಲ್ಟ್ ಸ್ಮಗ್ಲಿಂಗ್ ಮಾಡೋಕೆ ಹತ್ತಾರು ಬಾರಿ ದುಬೈಗೆ ಹೋಗಿ ಬರ್ತಾರೆ. ಇವರಿಗೆ ಪೊಲೀಸರೇ ರಕ್ಷಣೆ ಕೊಡ್ತಾರೆ. ಇಬ್ಬರು ಸಚಿವರು ಹಿಂದಿದ್ದಾರೆಂಬ ಮಾತಿದೆ. ಇಷ್ಟು ರಾಜಾರೋಷವಾಗಿ ನಡೆಯೋಕೆ ಕಾರಣವೇನು. ಯಾರು ಇದರ ಹಿಂದಿರುವ ಸಚಿವರು ? ಈ ಮಾಫಿಯಾ ಮಟ್ಟ ಹಾಕಬೇಕು. ಇದರ ಹಿಂದಿರುವ ಪ್ರಭಾವಿಗಳನ್ನ ಪತ್ತೆ ಮಾಡಬೇಕು.ಇದಕ್ಕೆ ಗೃಹ ಸಚಿವರು ಉತ್ತರ ಕೊಡಬೇಕು ಎಂದು ಸುನೀಲ್ ಕುಮಾರ್ ಪ್ರಸ್ತಾಪಿಸಿದ್ರು.
ಸಿಬಿಐನವರೇ ಕಂಡು ಹಿಡಿದರೆ ನೊಡೋಣ
ಬಿಜೆಪಿ ಶಾಸಕ ಸುನೀಲ್ ಕುಮಾರ್ ಮನವಿಗೆ ಪ್ರಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್,
ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇದು ಅಂತರಾಷ್ಟ್ರೀಯ ಮಟ್ಟದ ವಿಚಾರ. ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಇಲ್ಲ. ಸಿಬಿಐಗೆ ಕೊಟ್ಟಿದ್ದೇವೆ ಅನ್ನೋದು ಪತ್ರಿಕೆಯಲ್ಲಿ ಬಂದಿದೆ.
ಡಿಐಎಆರ್ ನವರು ಇದನ್ನ ಹಿಡಿದಿರೋದು, ಅವರ ತಂದೆ ಡಿಜಿಪಿ ಇದ್ದಾರೆ. ಅವರ ತಂದೆ ರಕ್ಷಣೆ ಕೊಟ್ಟಿರಬಹುದೆಂಬ ಆರೋಪವಿದೆ. ಇಬ್ಬರು ಸಚಿವರು ಇದ್ದಾರೆ ಅಂತೀರ. ಇದನ್ನ ಸಿಬಿಐನವರೇ ಕಂಡು ಹಿಡಿಯಬೇಕು. ಸಿಬಿಐನವರೇ ಕಂಡು ಹಿಡಿದರೆ ನೊಡೋಣ ಅಂತ ಪರಮೇಶ್ವರ್ ಜಾರಿಕೊಂಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ರನ್ಯಾ ರಾವ್ ಗೆ ರಕ್ಷಣೆ ಹೇಗೆ ಕೊಟ್ರು. ಇದರ ಬಗ್ಗೆ ತನಿಖೆ ಆಗಬೇಕಲ್ವಾ? ಸಿಬಿಐಗೆ ಕೊಟ್ಟಿರೋದು ಗೊತ್ತಿಲ್ಲ ಅಂದ್ರೆ ಹೇಗೆ? ಅಂತ ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಶ್ನೆ ಮಾಡದ್ರು. ತನಿಖೆ ನಡೆಯುತ್ತಿದೆ ಹೆಚ್ಚಿನ ಮಾಹಿತಿ ಇಲ್ಲ. ನಮ್ಮ ವ್ಯಾಪ್ತಿಯಲ್ಲಿ ಏನಾಗಿದೆ ಅದನ್ನ ತನಿಖೆ ಮಾಡ್ತೇವೆ. ಪ್ರೋಟೋಕಾಲ್ ಕೊಟ್ಟ ಬಗ್ಗೆ ತನಿಖೆ ಮಾಡ್ತೇವೆ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ರನ್ಯಾರಾವ್ ಗೆ ಕೆಐಎಡಿಬಿ ಲ್ಯಾಂಡ್
ನಟಿ ರನ್ಯಾರಾವ್ ಗೆ ಕೆಐಡಿಬಿ ಲ್ಯಾಂಡ್ ನೀಡಲಾಗಿದೆಯಂತೆ. ನಿಮಗೂ ಲ್ಯಾಂಡ್ ಕೊಡಬಹುದು, ಕೆಐಡಿಬಿ ಇರೋದೆ ಲ್ಯಾಂಡ್ ಕೊಡೊದಕ್ಕೆ. ಯಾವುದೇ ಸರ್ಕಾರ ಇದ್ರು ಲ್ಯಾಂಡ್ ಕೊಡಬೇಕು. ಇದ್ರಲ್ಲಿ ಯಾರಾದ್ರು ಪ್ರಭಾವ ಇದ್ರೆ, ಕೇಳಿದಕ್ಕಿಂತ ಹೆಚ್ಚಾಗಿ ಲ್ಯಾಂಡ್ ಕೊಟ್ಟಿದ್ರೆ ಅದು ತಪ್ಪು . ಯಾರೇ ತಪ್ಪು ಮಾಡಿದ್ರು ಅದನ್ನ ಕೇಳುವ ಅಧಿಕಾರ ಸರ್ಕಾರಕ್ಕೆ ಇದೆ. ಸಿನಿಮಾದಲ್ಲಿ ಹೆಸರು ಮಾಡಿದ್ದಕ್ಕೆ ಏನ್ ಬೇಕಾದ್ರು ಮಾಡಬಹುದು ಅನ್ನೊದು ತಪ್ಪು.ತಪ್ಪಿತಸ್ಥರು ಯಾರೇ ಇದ್ರು ಸರ್ಕಾರ ಹೇಳಬೇಕು ಅಂತ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಯಾರೋ ಮಂತ್ರಿಗೆ ಫೋನ್ ಮಾಡಿದ್ರಂತೆ !
ರನ್ಯಾ ರಾವ್ ಪ್ರಕರಣದಲ್ಲಿ ಈಗಾಗಲೇ ಹಲವರ ಹೆಸರುಗಳು ಕೇಳಿ ಬರ್ತಿದೆ.
ತನಿಖೆ ನಡೆಯುತ್ತಿರುವಾಗ ಹೆಸರು ಹೇಳೊದು ಸರಿಯಲ್ಲ. ಸಿಬಿಐ ಇಡಿ ಐಟಿ ತನಿಖೆಯನ್ನ ಮಾಡ್ತಿದೆ. ಯಾರು ಮಂತ್ರಿ ಹಿಂದೆ ಇದ್ದರೂ ಅವರನ್ನ ಅರೆಸ್ಟ್ ಮಾಡಬೇಕು. ರನ್ಯಾ ರಾವ್ ಅರೆಸ್ಟ್ ಮಾಡಿದಾಗ ಯಾರೋ ಮಂತ್ರಿಗೆ ಫೋನ್ ಮಾಡಲು ಹೋದ್ರು. ಆಗ ಫೋನ್ ಕಿತ್ತುಕೊಂಡ್ರು ಅಂತಿದೆ. ಅಧಿಕಾರಿಗಳು ಗೌಪ್ಯತೆಯನ್ನ ಕಾಪಾಡಿಕೊಂಡಿದ್ದಾರೆ. ನಡೆದಿರೋ ಸತ್ಯ ಹೊರಗಡೆ ಬರಬೇಕು. ಅದರ ಹಿಂದೆ ಯಾರಿದ್ದಾರೆ ಅನ್ನೊದನ್ನ ಸರ್ಕಾರ ಹೇಳಲಿ ಅಂತ ಛಲವಾದಿ ನಾರಾಯಣ್ ಸ್ವಾಮಿ ಹೇಳಿದ್ದಾರೆ..