ಬೆಂಗಳೂರು: ಸಿಎಂ ಸಿದ್ದರಾಮಯ್ಯ ದರೋಡೆಕೋರರ ನಾಯಕ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ ಮಂತ್ರಿಗಳ ಪಾತ್ರ ಇದೆ ಎಂದು ಚಂದ್ರಶೇಖರನ್ ಡೆತ್ ನೋಟ್ ನಲ್ಲಿ ಬರೆದಿತ್ತು.
ಆದರೂ ಇಷ್ಟು ತಡವಾಗಿ ರಾಜೀನಾಮೆ ತೀರ್ಮಾನ ಮಾಡಿದ್ದಾರೆ. ಕೈ ಹುಣ್ಣಿಗೆ ಕನ್ನಡಿ ಬೇಕಾ? ಚಂದ್ರಶೇಖರನ್ ಆತ್ಮಹತ್ಯೆ ಆದ ಕೂಡಲೇ ರಾಜೀನಾಮೆ ಪಡೆಯಬೇಕಿತ್ತು. ಕೇಸ್ ಮುಚ್ಚಿ ಹಾಕಲು ರಾಜೀನಾಮೆ ಪಡೆಯಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ. ಬಿಜೆಪಿ ಈ ಹಗರಣದ ವಿರುದ್ಧ ಹೋರಾಟ ಮಾಡಿತ್ತು. ರಾಜ್ಯಪಾಲರ ಭೇಟಿ ಮಾಡಿ ಹಗರಣದ ವಿರುದ್ಧ ದೂರು ನೀಡಿದ್ದೇವೆ.
High Court: ನಿರುದ್ಯೋಗದ ನೆಪ ಹೇಳಿ ಜೀವನಾಂಶದಿಂದ ಪತಿ ತಪ್ಪಿಸಿಕೊಳ್ಳಲಾಗದು: ಹೈಕೋರ್ಟ್ ಆದೇಶ
ಈಗ ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದಾರೆ. ಸಚಿವರ ರಾಜೀನಾಮೆ ಮಾತ್ರ ಸಾಲದು, ಸಿಎಂ ಸಹ ರಾಜೀನಾಮೆ ಕೊಡಬೇಕು. ಇದೊಂದು ಹಗಲು ದರೋಡೆ. ಸಿಎಂ ಅನುಮತಿ ಇಲ್ಲದೆ ಇಷ್ಟು ಹಣ ಹೊರಗೆ ಹೋಗಿಲ್ಲ. ಇದು ಒಂದು ಇಲಾಖೆಯ ಭ್ರಷ್ಟಾಚಾರ ಅಲ್ಲ. ಬೇರೆ ಬೇರೆ ಇಲಾಖೆಯ ನಿಗಮದಲ್ಲೂ ಭ್ರಷ್ಟಾಚಾರ ಆಗಿದೆ. ಇದನ್ನ ನಮ್ಮ ನಾಯಕರು ಪತ್ತೆ ಹಚ್ಚುತ್ತಿದ್ದಾರೆ ಎಂದರು.